HEALTH TIPS

ಬುಡಕಟ್ಟು ಸಮುದಾಯಗಳೊಂದಿಗೆ ಸಂವಾದ: ವಿವಿಧತೆಯಲ್ಲಿ ಏಕತೆ ಮಹತ್ವ ಸಾರಿದ ಭಾಗವತ್‌

ರಾಂಚಿ: ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು 'ವಿವಿಧತೆಯಲ್ಲಿ ಏಕತೆ'ಯ ಮಹತ್ವದ ಕುರಿತು ಶನಿವಾರ ಒತ್ತಿ ಹೇಳಿದರು.

ಬುಡಕಟ್ಟು ಸಮುದಾಯಗಳೊಂದಿಗೆ ಸಂವಾದ ನಡೆಸಿದ ಅವರು, ಧಾರ್ಮಿಕ ಮತಾಂತರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು.

'ಭಾರತದ ಸಂಪ್ರದಾಯ ಮತ್ತು ಧರ್ಮ ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ಸಾರುತ್ತವೆ.

ಹಾದಿಯು ವಿಭಿನ್ನವಾಗಿರಬಹುದು; ಆದರೆ ಗಮ್ಯ ಒಂದೇ. ಎಲ್ಲಾ ಹಾದಿಗಳೂ ಸರಿಯಾದವು, ಯಾವುದೂ ತಪ್ಪಲ್ಲ ಎಂದು ಭಾರತೀಯ ಧರ್ಮ ಹೇಳುತ್ತದೆ. ಇದೇ ಸನಾತನ, ಹಿಂದೂ ಮತ್ತು ಭಾರತೀಯ ಧರ್ಮ ಎಂದು ಹೇಳಿದರು' ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್‌ ಶಾಸಕ ರಾಮೇಶ್ವರ ಓರಾನ್‌ ಅವರ ಪುತ್ರಿ ನೀಶಾ ಒರಾನ್‌ ತಿಳಿಸಿದರು.

ಭಾಗವತ್‌ ಅವರು ಎರಡು ದಿನ ಜಾರ್ಖಂಡ್‌ ಪ್ರವಾಸದಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries