HEALTH TIPS

ಏರು ಗತಿಯ ಬಂಗಾರ; ಸಂಕಷ್ಟದಲ್ಲಿ ಅಸಂಘಟಿತ ಆಭರಣ ತಯಾರಕರು

ನವದೆಹಲಿ: ಭಾರತದಲ್ಲಿ ಚಿನ್ನದ ದರ ಏರು ಹಾದಿಯಲ್ಲಿ ಮುಂದುವರೆದಿದೆ. ಗುರುವಾರ ಹಠಾತ್ ಕುಸಿದಿದ್ದ ಚಿನ್ನದ ದರ ಶುಕ್ರವಾರ ಮಾರುಕಟ್ಟೆ ಆರಂಭವಾಗುತ್ತಲೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಈ ಏರಿಕೆ ಶನಿವಾರವೂ ಮುಂದುವರಿಯಿತು. ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ ರೂ. 15,862 ಆಗಿದೆ. ಸ್ಥಳೀಯ ಬೇಡಿಕೆ, ಪೂರೈಕೆ ಹಾಗೂ ರಾಜ್ಯ ತೆರಿಗೆಗಳ ಪ್ರಕಾರ ಚಿನ್ನದ ಬೆಲೆ ಕಾಲಕಾಲಕ್ಕೆ ಬದಲಾಗುತ್ತವೆ.

ಮಂಗಳೂರಿನಲ್ಲಿ ನಿನ್ನೆಯ ಚಿನ್ನದ ದರವೆಷ್ಟು?

ಶನಿವಾರ ಜನವರಿ 24ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,862 (+147) ರೂ. ಗೆ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,540 (+135) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,897 (+111) ರೂ. ಬೆಲೆಗೆ ತಲುಪಿದೆ.

ದೇಶದಲ್ಲಿ ಶನಿವಾರದ ಚಿನ್ನದ ದರ ಹೀಗಿದೆ

ಭಾರತದಲ್ಲಿ ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ರೂ. 15,862 ಆಗಿದೆ. ನಿನ್ನೆ ಮಾರುಕಟ್ಟೆ ಕೊನೆಗೊಂಡಾಗ ರೂ. 15,715 ಕ್ಕೆ ತಲುಪಿತ್ತು. ಹೀಗಾಗಿ ಇಂದಿನ ಏರಿಕೆ ರೂ. 147 ಆಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ರೂ. 14,540 ಆಗಿದ್ದು, ನಿನ್ನೆ ರೂ. 14,405 ಇತ್ತು. ಹೀಗಾಗಿ ಇಂದಿನ ಏರಿಕೆ ರೂ. 135 ಆಗಿದೆ. ಇಂದು 18 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ರೂ. 11,897 ಆಗಿದ್ದು, ನಿನ್ನೆ ರೂ. 11,786 ಇತ್ತು. ಹೀಗಾಗಿ ಇಂದಿನ ಏರಿಕೆ ರೂ. 111 ಆಗಿದೆ.

ಸಂಕಷ್ಟದಲ್ಲಿರುವ ಆಭರಣ ತಯಾರಕರು

ʼಮನಿ ಕಂಟ್ರೋಲ್ʼ ವರದಿಯ ಪ್ರಕಾರ ಭಾರತದಲ್ಲಿ ಚಿನ್ನ-ಬೆಳ್ಳಿ ದರದ ಏರಿಳಿತದಿಂದಾಗಿ ದೇಶದ ಸ್ಥಳೀಯ ಆಭರಣ ತಯಾರಕರು ಮತ್ತು ಚಿನ್ನದ ಕರಕುಶಲಕಾರರು ಶೇ 45ರಷ್ಟು ಪ್ರಮಾಣದ ವ್ಯವಹಾರ ಕುಸಿತ ಎದುರಿಸುತ್ತಿದ್ದಾರೆ. ಚಿನ್ನದ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಗ್ರಾಹಕರು ಖರೀದಿಯಿಂದ ಹಿಂದೆ ಸರಿಯುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎಂದು ವರದಿ ಹೇಳಿದೆ.

ದೀಪಾವಳಿ ಬಳಿಕ ಪರಿಸ್ಥಿತಿ ಇನ್ನಷ್ಟು ಕೆಟ್ಟಿದೆ. ವಿವಾಹದಂತಹ ತುರ್ತು ಸ್ಥಿತಿ ಹೊರತುಪಡಿಸಿ ಯಾರೂ ಚಿನ್ನ ಖರೀದಿಸುತ್ತಿಲ್ಲ. ಭಾರತದಲ್ಲಿ 3 ಲಕ್ಷದಿಂದ 3.5 ಲಕ್ಷದವರೆಗೆ ಸಣ್ಣ ಮತ್ತು ಮಧ್ಯಮ ಮಟ್ಟದ ಸ್ವತಂತ್ರ ಅಂಗಡಿಗಳಿವೆ. ಇವುಗಳು ವ್ಯಾಪಾರದ ಶೇ 60-65ರಷ್ಟು ಪಾಲು ಹೊಂದಿವೆ. ಇವರು ಗ್ರಾಹಕರು ಹೇಳಿದ ರೀತಿಯಲ್ಲಿ ವಿನ್ಯಾಸ ರಚಿಸಿಕೊಡುತ್ತಿದ್ದರೂ, ಇತ್ತೀಚೆಗೆ ವ್ಯವಹಾರವೇ ಕುಸಿದಿದೆ.

ವರದಿಯ ಪ್ರಕಾರ, ಮಾರುಕಟ್ಟೆಯ ಸುಮಾರು ಶೇ 53ರಷ್ಟು ಪಾಲು ಹೊಂದಿರುವ ಅಸಂಘಟಿತ ವಲಯದ ಆಭರಣ ತಯಾರಕರು ನೇರವಾಗಿ ಸಂಗ್ರಹ ಖರೀದಿ, ಹಣಕಾಸು ರಕ್ಷಣೆಯ ಕೊರತೆ ಮತ್ತು ಸೀಮಿತ ನಗದು ಸಂಪನ್ಮೂಲಗಳ ಕಾರಣದಿಂದ ತೀವ್ರ ಒತ್ತಡಕ್ಕೆ ಬಿದ್ದಿದ್ದಾರೆ.

ಆದರೆ ಸಂಘಟಿತ ಮತ್ತು ದೊಡ್ಡ ಬ್ರಾಂಡೆಡ್ ಮಳಿಗೆಗಳು ಲಾಭ ಮಾಡಿಕೊಳ್ಳುತ್ತಿವೆ. ವರದಿಯ ಪ್ರಕಾರ, 18 ಕ್ಯಾರೆಟ್ ಮತ್ತು ಸ್ಟಡೆಡ್ ಆಭರಣಗಳತ್ತ ಗ್ರಾಹಕರ ಒಲವು ಹೆಚ್ಚಾಗುತ್ತಿದೆ. ಟೈಟನ್ ಕಂಪನಿಯ ತನಿಷ್ಕ್ 9 ಕ್ಯಾರೆಟ್ ಚಿನ್ನದ ಆಭರಣ ಪರಿಚಯಿಸುವ ಮೂಲಕ ಮೂರನೇ ತ್ರೈಮಾಸಿಕದಲ್ಲಿ ಶೇ 40ರಿಂದ 50ರಷ್ಟು ಮಾರಾಟ ವೃದ್ಧಿಸಿಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries