HEALTH TIPS

ಈ ರೈಲು ನಿಲ್ದಾಣದಲ್ಲಿ ಒಂದೇ ಒಂದು ಕಸದ ತುಂಡಿಲ್ಲ; ಇದು ಇರೋದು ಎಲ್ಲಿ ಗೊತ್ತಾ!?

ತಿರುವನಂತಪುರಂ: ಭಾರತದ ರೈಲ್ವೆ ನಿಲ್ದಾಣಗಳು ಸಾಮಾನ್ಯವಾಗಿ ಗದ್ದಲದಿಂದ ಕೂಡಿರುತ್ತವೆ. ಪ್ರಯಾಣಿಕರು ಎಲ್ಲ ದಿಕ್ಕುಗಳಲ್ಲಿಯೂ ಧಾವಿಸುತ್ತಾರೆ. ಡಸ್ಟ್‌ ಬಿನ್‌ ಇದ್ದರೂ ಕಸಗಳನ್ನು ಅಲ್ಲಲ್ಲೇ ಎಸೆದು ಹೋಗುತ್ತಾರೆ. ಆದರೆ ಕೇರಳದ ಒಂದು ನಿಲ್ದಾಣವು ವಿಭಿನ್ನ ಕಾರಣಕ್ಕಾಗಿ ಗಮನ ಸೆಳೆದಿದೆ.

ಸಾಮಾನ್ಯ ಅವ್ಯವಸ್ಥೆಯ ಬದಲಿಗೆ ಇಲ್ಲಿನ ಶಾಂತ ವಾತಾವರಣ, ತೆರೆದ ಸ್ಥಳಗಳು ಮತ್ತು ನೈರ್ಮಲ್ಯಕ್ಕೆ ಅನೇಕರು ಪ್ರಭಾವಿತರಾಗಿದ್ದಾರೆ. ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ (viral video). ವಿಡಿಯೊ ನೋಡಿದ ನೆಟ್ಟಿಗರು ಕೂಡ ಅಚ್ಚರಿಗೊಂಡಿದ್ದಾರೆ.

ಈ ವಿಡಿಯೊದಲ್ಲಿ ರೈಲು ನಿಲ್ದಾಣವನ್ನು ನೋಡುವಾಗ ಎದ್ದು ಕಾಣುವುದು ರೈಲು ಅಥವಾ ಜನಸಂದಣಿಯಲ್ಲ. ರೈಲು ನಿಲ್ದಾಣದ ಸ್ವಚ್ಛತೆ ಹಾಗೂ ಉತ್ತಮವಾಗಿ ನಿರ್ವಹಿಸಲ್ಪಟ್ಟ ದೃಶ್ಯ ಮನಸೂರೆಗೊಳ್ಳುತ್ತದೆ. ಈ ವಿಡಿಯೊ ಸಾರ್ವಜನಿಕ ಸ್ಥಳಗಳು ಮತ್ತು ನಾಗರಿಕ ಪ್ರಜ್ಞೆ ಬಗ್ಗೆ ಚರ್ಚೆಗಳನ್ನು ಹುಟ್ಟು ಹಾಕಿದೆ. ಅನೇಕರು ಈ ರೀತಿ ನೈರ್ಮಲ್ಯವಾಗಿಟ್ಟಿದ್ದಕ್ಕೆ ಕೇರಳವನ್ನು ಶ್ಲಾಘಿಸಿದ್ದಾರೆ. ಪ್ಲಾಟ್‌ಫಾರ್ಮ್‌ನ ಬಳಿಯ ಟ್ರ್ಯಾಕ್‍ನಲ್ಲಿ ರೈಲು ಚಲಿಸುತ್ತಿರುವಾಗ, ಪ್ರಯಾಣಿಕರು ನಡೆಯುತ್ತ ಹೋಗುವುದರಿಂದ ವಿಡಿಯೊ ಪ್ರಾರಂಭವಾಗುತ್ತದೆ.

ಕೆಲವು ಪ್ರಯಾಣಿಕರು ಬೆಂಚುಗಳ ಮೇಲೆ ಕುಳಿತುಕೊಂಡಿದ್ದರೆ. ಕೆಲವರು ನಡೆದುಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲವರು ರೈಲಿಗಾಗಿ ಕಾಯುತ್ತಿದ್ದಾರೆ. ಈ ವೇಳೆ ನಿಲ್ದಾಣದ ನೆಲವು ಸ್ವಚ್ಛವಾಗಿ ಮತ್ತು ಸ್ಪಷ್ಟವಾಗಿ ಕಾಣುತ್ತದೆ. ಯಾವುದೇ ಕಸ ಕಾಣಿಸುವುದಿಲ್ಲ. ಕಸದ ಬುಟ್ಟಿಗಳನ್ನು ಸರಿಯಾಗಿ ಇರಿಸಲಾಗಿದೆ. ಒಟ್ಟಾರೆ ಪ್ರದೇಶವು ಉತ್ತಮವಾಗಿ ನಿರ್ವಹಿಸಲ್ಪಟ್ಟಿದೆ ಎಂಬುದನ್ನು ಈ ವಿಡಿಯೊ ತೋರಿಸುತ್ತದೆ.

ಕಸ, ಧೂಳಿನ ಪರಿಸರ ಇಲ್ಲದೆ ಪ್ರಯಾಣಿಕರು ಮುಕ್ತವಾಗಿ ನಡೆಯುತ್ತಾರೆ. ಬೆಂಚುಗಳು, ಕಂಬಗಳು ಮತ್ತು ಪ್ರಯಾಣಿಕರು ಕಾಯುವ ಪ್ರದೇಶಗಳು ಅಚ್ಚುಕಟ್ಟಾಗಿ ಕಾಣುತ್ತವೆ. ಪ್ರವೇಶ ದ್ವಾರಗಳು ಸ್ವಚ್ಛವಾಗಿ ಕಾಣುತ್ತವೆ.

ಈ ದೃಶ್ಯ ಹಲವರನ್ನು ಅಚ್ಚರಿಗೊಳಿಸಿದೆ. ಯಾವುದೇ ವಿಶೇಷ ಕಾರ್ಯಕ್ರಮ ಅಥವಾ ಶುಚಿಗೊಳಿಸುವ ಅಭಿಯಾನ ನಡೆಯುತ್ತಿರಲಿಲ್ಲ. ಪ್ರತಿಯೊಬ್ಬರೂ ಜಾಗವನ್ನು ಜವಾಬ್ದಾರಿಯುತವಾಗಿ ಬಳಸುತ್ತಿದ್ದರಿಂದ ಇದು ಸಾಮಾನ್ಯ ದಿನದಂತೆ ಕಂಡು ಬರುತ್ತಿದೆ. ವಿಡಿಯೊವು ಸ್ಪಷ್ಟವಾದ ಸೈನ್‌ಬೋರ್ಡ್‌ಗಳು ಮತ್ತು ಹೊಳಪುಳ್ಳ ನೆಲವನ್ನು ಸಹ ಎತ್ತಿ ತೋರಿಸುತ್ತದೆ.

ನಿಲ್ದಾಣದಲ್ಲಿ ಒಂದೇ ಒಂದು ಕಸದ ತುಂಡು ಇಲ್ಲ. ಈ ದೃಶ್ಯವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಅದು ಹೇಗೆ ಪ್ರಭಾವಿತಗೊಳಿಸಿತು ಎಂಬುದನ್ನು ಈ ವಿಡಿಯೊ ತೋರಿಸುತ್ತದೆ. ಇಲ್ಲಿನ ಸ್ವಚ್ಛತೆಯು ದೈನಂದಿನ ಜೀವನದ ಭಾಗವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ವಿಡಿಯೊದಲ್ಲಿ ಬರೆಯಲಾಗಿದೆ.

ಇಲ್ಲಿದೆ ವಿಡಿಯೊ:

ಜನವರಿ 1ರಂದು ಹಂಚಿಕೊಳ್ಳಲಾದ ಈ ವಿಡಿಯೊ ಇಲ್ಲಿಯವರೆಗೆ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, ಹಲವರ ಗಮನ ಸೆಳೆದಿದೆ. ಇತರ ನಗರಗಳಿಗೆ ಹೋಲಿಸಿದರೆ ಕೇರಳದಲ್ಲಿ ನಾಗರಿಕ ಪ್ರಜ್ಞೆ ತುಂಬಾ ಉತ್ತಮವಾಗಿದೆ ಎಂದು ಒಬ್ಬರು ಬರೆದಿದ್ದಾರೆ. ಶೇಕಡಾ 100 ಸಾಕ್ಷರತೆ ಮತ್ತು ಶೇಕಡಾ 100 ಸಾಕ್ಷರತೆಯನ್ನು ಗೇಲಿ ಮಾಡುವ ಜನರ ನಡುವಿನ ವ್ಯತ್ಯಾಸ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು.

ಎರ್ನಾಕುಲಂ ನಿಲ್ದಾಣದಲ್ಲಿ ಈ ಸುಂದರ ದೃಶ್ಯ ಕಂಡು ಬಂದಿದೆ. ಮುಂಬೈಗಿಂತ ಭಿನ್ನವಾಗಿ ಕಂಡು ಬಂದಿದೆ. ಎಲ್ಲೆಡೆ ಕೊಳಕು ಹಳಿಗಳು, ಫಲಕಗಳ ಮೇಲೆ ಪಾನ್ ಮಸಾಲದ ಚಿತ್ತಾರವನ್ನೇ ನೋಡಿ ನೋಡಿ ರೋಸಿ ಹೋದವರಿಗೆ ವಿಭಿನ್ನ ನೋಟ ಕಾಣ ಸಿಗುತ್ತದೆ. ದೆಹಲಿಯೂ ಅವ್ಯವಸ್ಥೆಯ ತಾಣವಾಗಿದೆ. ಕೇರಳವು ತನ್ನ ಸ್ವಚ್ಛತೆಯ ಗೌರವಕ್ಕೆ ಅರ್ಹವಾಗಿದೆ ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಇದು ತಲಶ್ಯೇರಿ ಕಣ್ಣೂರು ನಿಲ್ದಾಣ ಎಂದು ಮತ್ತೊಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries