ಕುಂಬಳೆ: ಆರಿಕ್ಕಾಡಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕುಂಬಳೆ ಟೋಲ್ ಪ್ಲಾಜ್ಹಾವನ್ನು ತಕ್ಷಣ ನಿಲುಗಡೆಗೊಳಿಸಬೇಕೆಮದು ಆಗ್ರಹಿಸಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಸಾರ್ವಜನಿಕ ಆಹೋರಾತ್ರಿ ಪ್ರತಿಭಟನೆಗೆ ಕುಂಬಳೆ ಪ್ರೆಸ್ ಪೋರಂ ನೇತೃತ್ವದಲ್ಲಿ ಬುಧವಾರ ಸ್ಥಳಕ್ಕೆ ತೆರಳಿ ಬೆಂಬಲ ಸೂಚಿಸಲಾಯಿತು.
ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ವಾಹನಗಳಿಂದ ಟೋಲ್ ವಸೂಲು ಮಾಡುವುದರ ವಿರುದ್ಧ ಕ್ರಿಯಾ ಸಮಿತಿ ಆರಂಭಿಸಿದ ಅನಿರ್ದಿಷ್ಟಾವಧಿ ಚಳವಳಿ ಬುಧವಾರ ಮುಂದುವರಿದು ಇಂದು ನಾಲ್ಕನೇ ದಿನಕ್ಕೆ ಕಾಲಿರಿಸಿದೆ. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಚಳವಳಿಯಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳುತ್ತಿದ್ದು ಸಮಸ್ಯೆಗೆ ಪರಿಹಾರ ಕಾಣದೆ ಇದರಿಂದ ಹಿಂಜರಿಯುವುದಿಲ್ಲವೆಂದು ತಿಳಿಸಿದ್ದಾರೆ. ಇದೇ ವೇಳೆ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದು ಪತ್ರಕರ್ತರು ಸಂಪೂರ್ಣ ಬೆಂಬಲ ನೀಡಲು ಮೆರವಣಿಗೆ ಮೂಲಕ ತೆರಳಿ ಶಾಸಕ ಎಕೆಎಂ ಅಶ್ರಫ್ ಅವರಿಗೆ ಮನವಿ ನೀಡಿ ಟೋಲ್ ವಿರೋಧಿ ಮುಷ್ಕರ ಲಕ್ಷ್ಯ ಪ್ರಾಪ್ತಿಯಾಗಲೆಂದು ಸೂಚಿಸಿದರು.
ಫ್ರೆಸ್ ಪೋರಂ ಅಧ್ಯಕ್ಷ ಕೆಎಎಂ ಸತ್ತಾರ್, ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ, ಖಜಾಂಜಿ ಅಬ್ದುಲ್ ಲತೀಫ್ ಕುಂಬಳೆ, ಸದಸ್ಯರಾದ ಅಶ್ರಫ್ ಸ್ಕೈಲರ್, ರಫೀಕ್ ಕುಂಬಳೆ, ಧನರಾಜ ಐಲ, ಝ್ಯೆನು ಹಕ್ಕ್ ನ್ಯೂಸ್ ಅಡ್ಕ, ಶಿಯಾಬ್ ಮೊದಲಾದವರು ಭಾಗವಹಿಸಿದ್ದರು.
ಫ್ರೆಸ್ ಪೋರಂ ನೇತೃತ್ವದಲ್ಲಿ ರಚಿಸಿದ ವಿಶೇಷ ಜ್ಞಾಪನಾ ಪತ್ರವನ್ನು ಕೇಂದ್ರ ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ, ಶಾಸಕ ಎಕೆಎಂ ಅಶ್ರಫ್, ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಎನ್.ಎಡಚ್.ಎ.ಐ. ಕಣ್ಣೂರು ವಿಭಾಗಾಧಿಕಾರಿಗಳಿಗೆ ಕಳಿಸಲಾಯಿತು.



