ಪಣಜಿ: ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ಮುಖಂಡರು ರಾಜೀನಾಮೆ ನೀಡಿದ್ದು, ಗೋವಾದಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಮಿತ್ ಪಾಲೇಕರ್, ಹಂಗಾಮಿ ಮುಖ್ಯಸ್ಥ ಶ್ರೀಕೃಷ್ಣ ಪರಬ್ ಮತ್ತು ಇತರ ಮೂವರು ಪದಾಧಿಕಾರಿಗಳು ಸೋಮವಾರ ರಾಜೀನಾಮೆ ನೀಡಿದ್ದಾರೆ.
ಪಾಲೇಕರ್, ಪರಬ್ ಮತ್ತು ಯುವ ಘಟಕದ ಅಧ್ಯಕ್ಷ ರೋಹನ್ ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜೀನಾಮೆಯನ್ನು ಘೋಷಿಸಿದರು. ಇದರ ಬೆನ್ನಿಗೆ ಉಪಾಧ್ಯಕ್ಷರಾದ ಚೇತನ್ ಕಾಮತ್, ಸರ್ಫರಾಜ್ ಸಹ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರೂ ಸುದ್ದಿಗೋಷ್ಠಿಯಲ್ಲಿ ಇರಲಿಲ್ಲ.
ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಸಾರಥ್ಯದ ಎಎಪಿ ಕಳಪೆ ಸಾಧನೆ ಮಾಡಿದ ಬೆನ್ನಿಗೆ, ಪಕ್ಷದ ಮುಖಂಡರು ರಾಜೀನಾಮೆ ಸಲ್ಲಿಸಿದ್ದಾರೆ.

