HEALTH TIPS

ಗ್ರೋಕ್‌ ಎಐ ಆವಾಂತರ| ಮಾಲ್ದೀವ್ಸ್ ಅಧ್ಯಕ್ಷರಿಗೆ ಮೋದಿಯ 'ಎಕ್ಸ್' ಪೋಸ್ಟ್ ತಪ್ಪಾಗಿ ಭಾಷಾಂತರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾಲ್ದೀವ್ಸ್ ಅಧ್ಯಕ್ಷರಿಗೆ ಎಕ್ಸ್‌ನಲ್ಲಿ ಪ್ರಸಾರ ಮಾಡಿದ ರಾಜತಾಂತ್ರಿಕ ಪೋಸ್ಟ್ ಒಂದನ್ನು , ಗ್ರೋಕ್ ಎಐ ತಪ್ಪಾಗಿ ಭಾಷಾಂತರಿಸಿರುವುದು ವಿವಾದಕ್ಕೆ ಗ್ರಾಸವಾಗಿದೆ.

ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಭಾರತದ ಗಣರಾಜ್ಯೋತ್ಸವದ ಶುಭಾಶಯಗಳಿಗೆ ಪ್ರತಿಕ್ರಿಯಿಸುತ್ತಾ ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು.

ಆದರೆ ಈ ಪೋಸ್ಟ್ ಅನ್ನು ಭಾಷಾಂತರಿಸುವಾಗ ಗ್ರೋಕ್ ಎಐ, ಮಾಲ್ದೀವ್ಸ್‌ನಲ್ಲಿ ರಾಜಕೀಯ ಉದ್ವಿಗ್ನತೆಗೆ ಕಾರಣವಾಗುವಂತಹ ಭಾಷೆಯನ್ನು ಸೇರಿಸಿದೆ ಮತ್ತು ಆ ದ್ವೀಪರಾಷ್ಟ್ರದಲ್ಲಿ ನಡೆದಿದೆಯೆನ್ನಲಾದ ಭಾರತ ವಿರೋಧಿ ಅಭಿಯಾನಗಳ ಬಗ್ಗೆಯೂ ಪ್ರಸ್ತಾವಿಸಿದೆ.

ಮೋದಿ ಬರೆದಿದ್ದೇನು?

ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯುಝಿ ಅವರನ್ನುದ್ದೇಶಿಸಿ ಪ್ರಧಾನಿ ಮೋದಿ ಅವರು ಮಾಲ್ದೀವ್ಸ್‌ನ ದಿವೇಹಿ ಭಾಷೆಯಲ್ಲಿ ಬರೆದ ಪೋಸ್ಟ್‌ನಲ್ಲಿ, ''ಭಾರತದ 77 ಗಣರಾಜ್ಯೋತ್ಸವ ಸಂದರ್ಭ ನಿಮಗೆ ಹಾರ್ದಿಕ ಶುಭಾಶಯಗಳನ್ನು ಹಾಗೂ ಶುಭಾಕಾಂಕ್ಷೆೆಗಳನ್ನು ಸಲ್ಲಿಸುತ್ತಿದ್ದೇನೆ. ಉಭಯದೇಶಗಳ ಜನರಿಗೆ ಒಳಿತನ್ನುಂಟು ಮಾಡುವ ನಿಟ್ಟಿನಲ್ಲಿ ಜಂಟಿ ಪ್ರಯತ್ನಗಳನ್ನು ನಡೆಸುವುದನ್ನು ಮುಂದುವರಿಸಲಿದ್ದೇವೆ. ಮಾಲ್ದೀವ್ಸ್‌ನ ಎಲ್ಲಾ ಜನತೆಗೆ ಭವಿಷ್ಯದ ದಿನಗಳು ಅತ್ಯಂತ ಸಂತಸ ಹಾಗೂ ಸಮೃದ್ಧಿಯುತವಾಗಿರಲಿ ಎಂದು ಹಾರೈಸುತ್ತಿದ್ದೇನೆ'' ಎಂದು ಬರೆದಿದ್ದರು.

ಗ್ರೋಕ್‌ ಭಾಷಾಂತರ ಹೇಗಿತ್ತು?

ಮೋದಿಯವರ ಪೋಸ್ಟ್ ಅನ್ನು ಬಳಕೆದಾರರು ಕ್ಲಿಕ್ ಮಾಡಿದಾಗ, ಎಕ್ಸ್‌ನ ಎಐ ಅಸಿಸ್ಟೆಂಟ್ ಗ್ರೋಕ್ ಅದನ್ನು ಹೀಗೆ ಭಾಷಾಂತರಿಸಿದೆ. '' ಭಾರತದ 77ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಗಳು ಮಾಲ್ದೀವ್ಸ್‌ನಲ್ಲಿ ನಡೆದವು ಹಾಗೂ ಮಾಲ್ದೀವ್ಸ್ ಸರಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಈ ಸುಕುರಿಯಾ ಸರಕಾರವು ಜನತೆಯ ಭಾರತ ವಿರೋಧಿ ಅಭಿಯಾನದಲ್ಲಿ ಶಾಮೀಲಾಗಿತ್ತು. ಎರಡು ಭಾರತ ವಿರೋಧಿ ಅಭಿಯಾನಗಳಲ್ಲಿಯೂ ಅವರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು'' ಎಂದು ಗ್ರೋಕ್ ತಪ್ಪಾಗಿ ಭಾಷಾಂತರಿಸಿತ್ತು.

ಗ್ರೋಕ್ ಪ್ರಸಾರ ಮಾಡಿದ ಮೋದಿ ಅವರ ಭಾಷಾಂತರಗೊಂಡ ಪೋಸ್ಟ್ ಬಗ್ಗೆ ಕೆಲವು ಬಳಕೆದಾರರು ಗಮನಸೆಳೆದಾಗ ಈ ತಪ್ಪುಗಳು ಬೆಳಕಿಗೆ ಬಂದವು.

ಮಾಲ್ದೀವ್ಸ್ ಹಾಗೂ ಭಾರತದ ನಡುವೆ ರಾಜತಾಂತ್ರಿಕ ಬಾಂಧವ್ಯ ಜಟಿಲಗೊಂಡಿರುವ ಸಂದರ್ಭದಲ್ಲಿಯೇ ಗ್ರೋಕ್ ಎಐನ ತಪ್ಪು ಭಾಷಾಂತರವು ಗಮನ ಸೆಳೆದಿದೆ.ಈ ತಪ್ಪು ಭಾಷಾಂತರದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಪ್ರಸಾರವಾಗಿದ್ದು, ಕಳವಳಕ್ಕೆ ಕಾರಣವಾಗಿತ್ತು.

ಆದಾಗ್ಯೂ ಈ ಬಗ್ಗೆ ಬಳಕೆದಾರರು ಚರ್ಚೆ ಆರಂಭಿಸುತ್ತಿದ್ದಂತೆಯೇ ಗ್ರೋಕ್‌ ಎಐ, ಭಾಷಾಂತರದಲ್ಲಾಗಿದ್ದ ಪ್ರಮಾದವನ್ನು ಸರಿಪಡಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries