HEALTH TIPS

ಎಕೆಪಿಎ ಕಾಸರಗೋಡು ವೆಸ್ಟ್ ಘಟಕದಿಂದ ಹೊಸ ವರ್ಷಾಚರಣೆ

ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಕಾಸರಗೋಡು ವೆಸ್ಟ್ ಘಟಕದ ವತಿಯಿಂದ ಹೊಸ ವರ್ಷಾಚರಣೆ ನಡೆಯಿತು. 

ಆಶ್ರಿತ್ ರೈಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವೆಸ್ಟ್ ಘಟಕದ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆ ವಹಿಸಿದ್ದರು. ದೀಪಾವಳಿ ಹಾಗೂ ಕೇರಳ ಪಿರವಿ ಅಂಗವಾಗಿ ಎಕೆಪಿಎ ಸದಸ್ಯರಿಗೆ ಕಾಸರಗೋಡು ವಲಯ ಮಟ್ಟದಲ್ಲಿ ನಡೆಸಿದ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ಪತ್ರಕರ್ತ ಹಾಗೂ ಲೇಖಕ ಪ್ರದೀಪ್ ಬೇಕಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಛಾಯಾಚಿತ್ರ ಹಾಗೂ ಪತ್ರಿಕಾ ಮಾಧ್ಯಮ ಒಂದೇ ನಾಣ್ಯದ ಎರಡು ಮುಖ ಹಾಗೂ ಚಿತ್ರ ಇದ್ದರೆ ಮಾತ್ರ ಪತ್ರಿಕಾ ವರದಿಗೆ ಹೆಚ್ಚಿನ ಮಹತ್ವ ಲಭ್ಯವಾಗಿ ಪರಿಣಾಮಕಾರಿಯಾಗಿರುತ್ತದೆ ಎಂದು ವಿಶ್ಲೇಷಿಸಿದರು. ಎಕೆಪಿಎಯಿಂದ ನಡೆಸಿದ ಹಲವಾರು ಕಾರ್ಯಕ್ರಮಗಳ ಚಿತ್ರಗಳು ಪತ್ರಿಕೆಗೆ ಲಭಿಸುತ್ತದ್ದು ಸಂಘಟನೆಯನ್ನು ಪ್ರಶಂಸಿಸಿದರು. ಬಳಿಕ ಅವರು ದೀಪಾವಳಿಯ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಪಡೆದ ರತೀಶ್ ರಾಮು ಅವರಿಗೆ ಸ್ಮರಣಿಕೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಕೆಪಿಎಯ ಹಲವು ಹುದ್ದೆ ಅಲಂಕರಿಸಿದ ಹಿರಿಯ ಛಾಯಾಗ್ರಾಹಕ ಗೋವಿಂದನ್ ಚಂಗರಕ್ಕಾಡ್ ಅವರಿಗೆ ಪ್ರಮಾಣ ಪತ್ರ ನೀಡಿದರು. ಈ ಸ್ಪರ್ಧೆಯಲ್ಲಿ ಪೆÇೀಷಕ ಬಹುಮಾನಗಳಿಸಿದ ಮನೀಶ್ ಸಿಗ್ನೇಚರ್ ಅವರಿಗೆ ಎಕೆಪಿಎ ಜಿಲ್ಲಾ ಪೋಟೋಗ್ರಫಿ ನೇಚರ್ ಕ್ಲಬ್ ಕೋರ್ಡಿನೇಟರ್ ಖ್ಯಾತ ಛಾಯಾಗ್ರಾಹಕ ಎರಡು ಸ್ಪರ್ಧೆಯ ತೀರ್ಪುಗಾರ ದಿನೇಶ್ ಇನ್ ಸೈಟ್ ಅವರು ಸ್ಮರಣಿಕೆ ನೀಡಿ ಮಾತನಾಡಿದ ಅವರು ಕಾಲ ಬಹುಬೇಗನೆ ಬದಲಾಗಿ ಈಗಿನ ಕಾಲಮಾನದ ಮೊಬೈಲ್ ಛಾಯಾಗ್ರಹಣದ ಕುರಿತು ಉಲ್ಲೇಖಿಸಿ ಛಾಯಾಗ್ರಹಣದ ಮೇಲೆ ಬೀರಿದ ಬದಲಾವಣೆ ಎಂದರು.

ಅತಿಥಿಗಳಾಗಿ ಭಾಗವಹಿಸಿದ ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷವಾಮನ್ ಕುಮಾರ್ ಅವರು ವೆಸ್ಟ್ ಘಟಕವು ನಡೆಸಿಕೊಂಡು ಬರುವ ಕಾರ್ಯಕ್ರಮಗಳನ್ನು ಪ್ರಶಂಸಿಸಿದರು. ಬಳಿಕ ಕೇರಳ ಪಿರವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾನಗರ ಘಟಕದ ಸನಲ್ ಅವರಿಗೆ ಸ್ಮರಣಿಕೆ, ಮಾನಪತ್ರ ನೀಡಿ ಗೌರವಿಸಿದರು. ವಲಯ ಕಾರ್ಯದರ್ಶಿ ಸರಿತಾ ಎಲ್ಲೋರ ದ್ವಿತೀಯ ಸ್ಥಾನಗಳಿಸಿದ ಕಾಸರಗೋಡಿನ ಕೃಷ್ಣ ಎಲ್ಲೋರ ಅವರಿಗೆ ಸ್ಮರಣಿಕೆ, ಪ್ರಮಾಣ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಎಕೆಪಿಎ ಜಿಲ್ಲಾ ಸಮಿತಿ ಜೊತೆ ಕಾರ್ಯದರ್ಶಿ ಮನು ಎಲ್ಲೋರ, ಜಿಲ್ಲಾ ಸಮಿತಿ  ಸದಸ್ಯ ಹಿರಿಯ ಛಾಯಾಗ್ರಾಹಕ ಮೈಂದಪ್ಪ, ವಲಯ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ವಿಡಿಯೋನಿಕ್ಸ್, ವಲಯ ಜೊತೆ ಕಾರ್ಯದರ್ಶಿ ಗಣೇಶ್ ರೈ, ಘಟಕದ ಉಪಾಧ್ಯಕ್ಷ ಅಭಿಷೇಕ್ ಸಿ, ಕೋಶಾಧಿಕಾರಿ ಅಮಿತ್, ಸಮಿತಿ ಸದಸ್ಯರುಗಳಾದ ನಾರಾಯಣನ್ ಟಿ, ವಾಸು ಎ, ಚಂದ್ರಶೇಖರ ಎಂ, ವಿಶಾಕ್, ಉದಯ ಲಾವಣ್ಯ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ಪ್ರಾಸ್ತಾವಿಕ ನುಡಿಗಳನ್ನಾಡಿ ಶ್ರೀಮತಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿ, ನಿರೂಪಿಸಿದರುಯ. ಪಿ.ಆರ್.ಒ. ವಿನೋದ್ ಕಲ್ಲಂಗೈ ವಂದಿಸಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries