ಉಪ್ಪಳ: ಸಂತಡ್ಕ ಶ್ರೀ ಅರಸು ಸಂಕಲ ಮಾಡದ ಜಾತ್ರಾ ಮಹೋತ್ಸವದ ಸಂದರ್ಭ ಅರಸು ಸಂಕಲ ಸೇವಾ ಬಳಗದ ವತಿಯಿಂದ ವೈದ್ಯ ಎಸ್.ಎನ್. ಭಟ್ ಮೀಯಪದವು ಅವರಿಗೆ ಶ್ರೀ ಸಂತಡ್ಕ ಮಾಡ ಪ್ರಶಸ್ತಿ ಪ್ರಧಾನ ಕ್ಷೇತ್ರ ಅಧ್ಯಕ್ಷ ಶ್ರೀಧರ ಭಟ್ ಉಪ್ಪಳ ಇವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಮೂರ್ತಿ ಬೋಳಂತಕೋಡಿ ರಾಮ್ ಭಟ್ ಉಪಸ್ಥಿತರಿದ್ದರು. ಚಿಗುರುಪಾದೆಯ ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ನ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ, ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಉಷಾ ಪೂಂಜ ಮಾನೂರು, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ ಬೆಜ್ಜ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಜ್ಯೋತಿ ಪಿ.ರೈ, ಬಲ್ಲಂಗುಡೇಲು ಸೇವಾ ಸಮಿತಿ ಅಧ್ಯಕ್ಷ ಜಯರಾಮ ಬಲ್ಲಂಗುಡೇಲು, ಅರಸು ಸಂಕಲ ಸೇವಾ ಬಳಗದ ಗೌರವಾಧ್ಯಕ್ಷ ನಾರಾಯಣ ಭಂಡಾರಿ ಸಂತಡ್ಕ ಅತಿಥಿಗಳಾಗಿದ್ದರು.
ಡಾ. ಜಯಪ್ರಕಾಶ ನಾರಾಯಣ ತೊಟ್ಟತ್ತೋಡಿ, ಎಸ್.ಎನ್ ಭಟ್ ಮೀಯಪದವು ಪರಿಚಯ ಮಾಡಿದರು. ಸಂತಡ್ಕದ ಹಿರಿಯ ಕಾರ್ಯಕರ್ತ ರಾಜೀವ ಶೆಟ್ಟಿ ಕೂಡೇಲು, ಸಿದ್ದಾನಂದ ಶೆಟ್ಟಿ ಬಾಕಿಮಾರು, ಶ್ರೀನಿವಾಸ ಶೆಟ್ಟಿ ಕೊಡಿಮಾರು, ಆನಂದ ಶೆಟ್ಟಿಗಾರ್, ಗುಮ್ಮಣ್ಣ ಶೆಟ್ಟಿಗಾರ್ ಇವರನ್ನು ಟೀಂ ಗರುಡ ಸಂತಡ್ಕ ತಂಡದಿಂದ ಗೌರವಿಸಲಾಯಿತು. ತ್ರಿಸ್ತರ ಪಂ.ನಲ್ಲಿ ಗೆಲುವು ಸಾಧಿಸಿದ ಮೀಂಜ ಪಂಚಾಯತಿ ಉಪಾಧ್ಯಕ್ಷೆ ಉಷಾ ಪೂಂಜ ಮಾನೂರು, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ ಬೆಜ್ಜ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಜ್ಯೋತಿ ಪಿ. ರೈ ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಕ್ಷೇತ್ರದ ಉಪಾಧ್ಯಕ್ಷ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿದರು. ತೇಜಶ್ರೀ ಸಂತಡ್ಕ ಪ್ರಾರ್ಥಿಸಿದರು. ಜಾತ್ರಾ ಮಹೋತ್ಸವದಂಗವಾಗಿ ಅರಸು ಸಂಕಲ ತಮ್ಮ ದೈವದ ನೇಮೋತ್ಸವ ಹಾಗೂ ಒಲಸರಿ ಉತ್ಸವ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅರಸು ಸಂಕಲ ಸೇವಾ ಬಳಗದ ಪ್ರಾಯೋಜಕತ್ವದಲ್ಲಿ ಎನ್ನನೇ ಕಥೆ ತುಳು ನಾಟಕ ಪ್ರದರ್ಶನ ನಡೆಯಿತು.

.jpg)
