ಕಾಸರಗೋಡು: ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಲಾರಿ ಢಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮಂಗಳೂರು ದೇರಳಕಟ್ಟೆ ನಾಟೆಕಲ್ ಅಕ್ಬರ್ ಮಂಜಿಲ್‍ನ ಮೊಹಮ್ಮದ್ ಶಫೀಕ್ (23), ಉಳ್ಳಾಲ ತಾಲೂಕು ಸಜಿಪನಡು ಲಕ್ಷ್ಮಣಕಟ್ಟೆಯ ಆಸಿಫ್ ಮೊಹಮ್ಮದ್ (41) ಎಂಬವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವರ ಜೊತೆಗಿದ್ದ ಇಸಾಂ ಹಾಗೂ ರಿಯಾಸ್ ಗಾಯಗೊಂಡಿದ್ದು ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ರಾತ್ರಿ 8.30ರ ವೇಳೆ ರಾಷ್ಟ್ರೀಯ ಹೆದ್ದಾರಿಯ ಚಟ್ಟಂಚಾಲ್ 55ನೇ ಮೈಲ್‍ನಲ್ಲಿ ಅಪಘಾತ ವುಂಟಾಗಿದೆ. ವಯನಾಡ್‍ಗೆ ವ್ಯಾಪಾರ ಅಗತ್ಯಕ್ಕಾಗಿ ತೆರಳಿ ಮರಳುತ್ತಿದ್ದಾಗ ಇವರು ಸಂಚರಿಸಿದ ಬಿಎಂಡಬ್ಲ್ಯು ಕಾರು ಹಾಗೂ ಎದುರಿನಿಂದ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಅಪಘಾತದಿಂದ ಕಾರಿನ ಮುಂಭಾಗ ಪೂರ್ಣವಾಗಿ ಹಾನಿಗೊಂಡಿದೆ. ಅಗ್ನಿಶಾಮಕದಳ ಹಾಗೂ ಮೇಲ್ಪರಂಬ ಪೆÇಲೀಸರು ತಲುಪಿ ಕಾರನ್ನು ಮುರಿದು ಅಪಘಾತಕ್ಕೀಡಾದವರನ್ನು ಅದರಿಂದ ಹೊರಕ್ಕೆ ತೆಗೆದಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಇಬ್ಬರು ಮೃತಪಟ್ಟಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.
ಮೃತ ಮೊಹಮ್ಮದ್ ಶಫೀಕ್ ಎಂಬವರು ಅಬ್ಬಾಸ್-ಮರಿಯಮ್ಮ ದಂಪತಿಯ ಪುತ್ರನಾಗಿದ್ದು, ಸಹೋದರ-ಸಹೋದರಿಯರಾದ ಸಿದ್ದಿಕ್ ಅಕ್ಬರ್, ಆಯಿಶ, ಸಾಜಿದ, ಶಾಹಿನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ದಿ. ಎಸ್.ಬಿ. ಮೊಹಮ್ಮದ್ ಎಂಬವರ ಪುತ್ರನಾದ ಆಸಿಫ್ ಮೊಹಮ್ಮದ್‍ರವರು ತಾಯಿ ರುಖಿಯಾ, ಪತ್ನಿ ಮಿಸ್ರಿಯ, ಮಕ್ಕಳಾದ ಇಮಾನ್, ಅಸುರ, ಸಹೋದರ-ಸಹೋದರಿಯರಾದ ಹಂಸ, ಅಯೂಬ್, ಲತೀಫ್, ಅಲ್ತಾಫ್, ಅಸ್ಮ, ಅಪ್ಸಾ, ಆಯಿಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.


