ಢಾಕಾ: ಬಾಂಗ್ಲಾದೇಶದಲ್ಲಿ ಫೆಬ್ರುವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಖಂಡಿಸಿದ್ದಾರೆ.
ತಮ್ಮ ಪಕ್ಷ ಅವಾಮಿ ಲೀಗ್ನಿ ನಿಷೇಧಿಸಿರುವುದನ್ನು ಅವರು ವಿರೋಧಿಸಿದ್ದಾರೆ.
'ನ್ಯಾಯಸಮ್ಮತ ಮತ್ತು ಪಾರದರ್ಶಕವಾದ ಚುನಾವಣೆ ನಡೆಯದಿದ್ದರೆ, ಬಾಂಗ್ಲಾದೇಶವು ದೀರ್ಘಕಾಲದ ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ' ಎಂದು ಹಸೀನಾ ಇ-ಮೇಲ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.
'ತಮ್ಮ ಪಕ್ಷವನ್ನು ನಿಷೇಧಿಸುವ ಮೂಲಕ ಲಕ್ಷಾಂತರ ಬೆಂಬಲಿಗರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಬಹುಪಾಲು ಜನರ ರಾಜಕೀಯ ಭಾಗವಹಿಸುವಿಕೆಯನ್ನು ತಡೆಯಲಾಗುತ್ತಿದೆ. ಇದು ಭವಿಷ್ಯದಲ್ಲಿ ಅಸ್ಥಿರತೆಯನ್ನು ಸೃಷ್ಟಿಸುತ್ತದೆ' ಎಂದು ತಿಳಿಸಿದ್ದಾರೆ.
'ಒಂದಿಷ್ಟು ಜನರನ್ನು ಹೊರಗಿಡುವ ಮೂಲಕ ಹುಟ್ಟಿದ ಸರ್ಕಾರದಿಂದ ವಿಭಜಿತ ರಾಷ್ಟ್ರ ಒಗ್ಗೂಡಲು ಸಾಧ್ಯವಿಲ್ಲ' ಎಂದಿದ್ದಾರೆ.

