ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಗೆ ಪಂಚಾಯಿತಿ ಬಾಡೂರಿನಲ್ಲಿ ಸರಣಿ ಕಳವುನಡೆದಿದ್ದು, ಒಂದು ಲಕ್ಷ ರೂ.ಗೂ ಹೆಚ್ಚಿನ ಮೊತ್ತ ಕಳವುಗೈಯಲಾಗಿದೆ. ಒಂದುಹೋಟೆಲ್, ಮೂರು ಅಂಗಡಿಗಳು ಹಾಗೂ ಒಂದು ಅಕ್ಷಯ ಕೇಂದ್ರದಿಂದ ಈ ಕಳವು ನಡೆದಿದೆ.
ಭಾನುವಾರ ಬೆಳಗ್ಗೆ ಅಂಗಡಿ ತೆರೆಯಲುಆಗಮಿಸಿದಾಗ ಕಳವುಬಳಕಿಗೆ ಬಂದಿದೆ. ಎಲ್ಲ ಅಂಗಡಿಗಳ ಶಟ್ಟರ್ ಬೀಗ ಒಡೆದು ಕೃತ್ಯವೆಸಗಲಾಗಿದೆ. ಬಾಲಕೃಷ್ಣ ಶೆಟ್ಟಿ ಎಂಬವರ ಹೋಟೆಲ್, ಸುರೇಶ್ ಬಾಡೂರು ಅವರ ಶಿವದುರ್ಗಾ ಸ್ಟಾಲ್, ರಾಜೇಶ್ ಶೆಟ್ಟಿ ಅವರ ದುರ್ಗಾಲಕ್ಷ್ಮೀ ಸ್ಟಾಲ್, ಇಬ್ರಾಹಿಂ ಎಂಬವರ ಅಕ್ಷಯ ಸೆಂಟರ್, ಕೊರಗಪ್ಪ ಅವರ ಬಿ.ಕೆ ಟೈಲರಿಂಗ್ ಶಾಪ್‍ನಿಂದ ಈ ಕಳವು ನಡೆದಿದೆ. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಮಡಿದ್ದು, ಸನಿಹದ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

