ಕಾಸರಗೋಡು: ವಿದ್ಯಾನಗರದಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ನ್ಯಾಯಾಲಯ ಸಮುಚ್ಛಯಕ್ಕೆ ಇಮೈಲ್ ಸಂದೇಶದ ಮೂಲಕ ಶಾಂಬು ಸ್ಪೋಟದ ಹುಸಿ ಬೆದರಿಕೆ ಹಿನ್ನೆಲೆಯಲ್ಲಿ ತಾಸುಗಳ ಕಾಲ ಆತಂಕದ ವಾತಾವರಣದಲ್ಲಿ ಕಳೆಯಬೇಕಾಗಿಬಂದಿತ್ತು.
ಗುರುವಾರ ಬೆಳಗ್ಗೆ ನ್ಯಾಯಾಲಯ ಕಲಾಪ ಅರಂಭಗೊಂಡ ಅಲ್ಪ ಹೊತ್ತಿನಲ್ಲಿ ನ್ಯಾಯಾಲಯದ ಔದ್ಯೋಗಿ ವೆಬ್‍ಸ್ಟೈಟ್‍ಗೆ ಬಾಂಬು ಬೆದರಿಕೆಯ ಸಂದೇಶ ಲಭಿಸಿದೆ. ಮಾಹಿತಿ ಲಭಿಸುತ್ತಿದ್ದಂತೆ ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ನ್ಯಾಯಾಲಯದೊಳಗಿದ್ದವರನ್ನು ಹೊರಗೆ ಕಳುಹಿಸಿ, ಶ್ವಾನ, ಬಾಂಬು ಸ್ಕ್ವೇಡ್‍ನೊಂದಿಗೆ ತಪಾಸಣೆ ಆರಂಭಿಸಿದ್ದಾರೆ. ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರನ್ನು ಹೊರಕ್ಕೆ ಕಳುಹಿಸಿ ತಪಾಸಣೆ ಕಾರ್ಯ ಚುರುಕುಗೊಳಿಸಲಾಗಿತ್ತು. ಈ ಸಂದರ್ಭ ಕೋರ್ಟು ಹಾಲ್ ಜನರಿಂದ ತುಂಬಿಕೊಂಡಿತ್ತು. ತಾಸುಗಳ ಕಾಲ ನಡೆಸಿದ ತಪಾಸಣೆಯ ನಂತರ ಪ್ರತಿಯೊಬ್ಬನನ್ನೂ ಗರಿಷ್ಠ ತಪಾಸಣೆಯೊಂದಿಗೆ ಒಳಗೆ ಬಿಡಲಾಗಿದೆ.
ಮಹಮ್ಮದ್ ಅಸ್ಲಾಂ ವಿಕ್ರಂ ತಮಿಳ್ ಲಿಬರೇಶನ್ ಆರ್ಗನೈಸೇಶನ್ ಎಂಬ ವಿಳಾದಿಂದ ಮೈಲ್ ಲಭಿಸಿದೆ. ಆರ್‍ಡಿಎಕ್ಸ್ ಬಳಸಿ ನಿರ್ಮಿಸಿದ ಮುರು ಆರ್‍ಡಿಎಕ್ಸ್-ಎಲ್ ಐಇಡಿಗಳನ್ನು ಗೇಟಿನ ಬಳಿ ಅಳವಡಿಸಲಾಗಿದೆ. ಮಧ್ಯಾಹ್ನದ ವೇಳೆಗೆ ಇಬ್ಬರು ಸ್ಥಳಕ್ಕಾಗಮಿಸಲಿದ್ದು, ರಿಮೋಟ್ ಮೂಲಕ ಇದನ್ನು ಸ್ಪೋಟಿಸಲಾಗುವುದು. ಇದು ಸ್ಪೋಟಗೊಳ್ಳದಿದ್ದಲ್ಲಿ ಆ ಇಬ್ಬರೂ ನ್ಯಾಯಾಲಯದೊಳಗೆ ಪ್ರವೇಶಿಸಿ ಸ್ವತಂ ಸ್ಪೋಟಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ನ್ಯಾಯಾಧೀಶರು,ವಕೀಲರು ಹಾಗೂ ಇತರ ಕಕ್ಷೀದಾರರು ನ್ಯಾಯಾಲಯದಿಂದ ಹೊರಕ್ಕೆ ಧಾವಿಸುವಂತೆ ತಿಳಿಸಲಾಗಿದೆ.
ವಿಕ್ರಂ ಅಂಡರ್‍ಸ್ಕ್ರೋಲ್ ರಾಜಗುರು@ಔಟ್‍ಲುಕ್ ಡಾಟ್ ಕಾಮ್ ಎಂಬ ಮೈಲ್‍ನಿಂದ ಈ ಸಂದೇಶ ರವಾನಿಸಲಾಗಿದೆ. ಸಂದೇಶದ ಬಗ್ಗೆ ಪೊಲೀಸರು ಮಾಹಿತಿ ನಿಡುತ್ತಿದ್ದಂತೆ ಆತಂಕಕ್ಕೀಡದ ಜನರು ನ್ಯಾಯಾಲಯದೊಳಗಿಂದ ಧಾವಿಸಿದ್ದಾರೆ. ದೀರ್ಘ ಕಾಲದ ತಪಾಸಣೆಯ ನಂತರ ಸಂದೇಶ ಹುಸಿ ಎಂಬುದಾಗಿ ಮನದಟ್ಟಾಗಿದ್ದು, ಸ್ಥಳದಲ್ಲಿದ್ದವರು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಬಿಗು ತಪಾಸಣೆಯ ನಂತರ ಜನರನ್ನು ನ್ಯಾಯಾಲಯದೊಳಗೆ ಕಳುಹಿಸಿಕೊಡಲಗಿದೆ. ಇದೇ ಸಂದರ್ಭ ಕೇರಳದ ಇತರ ನ್ಯಾಯಾಲಯಗಳಿಗೂ ಬಾಂಬುಬೆದರಿಕೆ ಕರೆ ಲಭಿಸಿತ್ತೆನ್ನಲಾಗಿದೆ.


