HEALTH TIPS

ರೈಲು ಮಾರ್ಗ ಉದ್ಘಾಟನೆಗೆ ತಡವಾಗಿ ಆಗಮಿಸಿದ ಮೆಕ್ಸಿಕೊ ಮೇಯರ್‌: ನಂತರ ಆಗಿದ್ದೇನು?

ಮೆಕ್ಸಿಕೊ: ಪಶ್ಚಿಮ ಮೆಕ್ಸಿಕೊದಲ್ಲಿ ಹೊಸ ರೈಲು ಮಾರ್ಗದ ಉದ್ಘಾಟನೆಗೆ ಅತಿಥಿಯಾಗಿದ್ದ ಟ್ಲಾಜೊಮುಲ್ಕೊ ಡಿ ಜುನಿಗಾದ ಮೇಯರ್ ಬರುವಷ್ಟರಲ್ಲಿ ರೈಲು ಹೊರಟು ಹೋದ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಗ್ವಾಡಲಜರಾ ಮೆಟ್ರೋಪಾಲಿಟನ್ ಪ್ರದೇಶದ ಭಾಗವಾದ ಟ್ಲಾಜೊಮುಲ್ಕೊ ಡಿ ಜುನಿಗಾದಲ್ಲಿ 4 ಹೊಸ ರೈಲು ಮಾರ್ಗಗಳ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮೊದಲ ರೈಲಿಗೆ ಚಾಲನೆ ನೀಡಲು ಮೇಯರ್ ಗೆರಾರ್ಡೊ ಕ್ವಿರಿನೊ ವೆಲಾಜ್ಕ್ವೆಜ್ ಚಾವೆಜ್ ಸಹಾಯಕರೊಂದಿಗೆ ಜಾಗಿಂಗ್ ಮಾಡುತ್ತ ರೈಲು ನಿಲ್ದಾಣಕ್ಕೆ ಆಗಮಿಸುವ ವೇಳೆಗೆ ರೈಲು ಹೊರಟು ಹೋಗಿತ್ತು.

ಎಲ್ ಹೆರಾಲ್ಡೊ ಡಿ ಮೆಕ್ಸಿಕೊ ವರದಿ ಪ್ರಕಾರ, ಈ ಹೊಸ ರೈಲು ಮಾರ್ಗ 21 ಕಿ.ಮೀ ವ್ಯಾಪಿಸಿದೆ. ಈ ಮಾರ್ಗದಲ್ಲಿ 8 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಪ್ರತಿನಿತ್ಯ 1 ಲಕ್ಕಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ.

ಭಾರತದಲ್ಲೂ ಹರಿದಾಡಿದ ವಿಡಿಯೊ

ಸದ್ಯ ಈ ವಿಡಿಯೋ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. 'ಭಾರತದಲ್ಲಿ ರಾಜಕೀಯ ನಾಯಕರು, ಸೆಲೆಬ್ರಿಟಿಗಳು ವಿವಿಧ ಕಾರ್ಯಕ್ರಮಗಳಿಗೆ ಬರುವುದಕ್ಕೆ ಗಂಟೆಗಟ್ಟಲೇ ತಡ ಮಾಡುತ್ತಾರೆ. ಒಂದು ವೇಳೆ ಭಾರತದಲ್ಲಿ ಇಂತಹ ಘಟನೆ ನಡೆದಿದ್ದರೆ, ರೈಲು ಚಾಲಕನನ್ನು ಬಂಧಿಸಲಾಗುತ್ತಿತ್ತು' ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನೂ ಕೆಲವರು 'ಭಾರತ ಹಾಗೂ ವಿದೇಶಗಳ ನಡುವೆ ಹೋಲಿಕೆ ಮಾಡಿದ್ದಾರೆ. ಭಾರತದಲ್ಲಿ ಸಚಿವರಿಗಾಗಿಯೇ ರೈಲು ಗಂಟೆಗಟ್ಟಲೇ ಕಾಯುತ್ತದೆ' ಎಂದು ಕಮೆಂಟ್‌ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries