HEALTH TIPS

ಸೋಮನಾಥ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ: ಅಪೂರ್ವ ಉತ್ಸವದಲ್ಲಿ ಮಿಂದ ಗುಜರಾತ್

ಸೋಮನಾಥ : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ ಸೋಮನಾಥ ದೇವಾಲಯದಲ್ಲಿ ನಡೆಯುತ್ತಿರುವ 'ಸೋಮನಾಥ ಸ್ವಾಭಿಮಾನ ಪರ್ವ' ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದಾರೆ.

ಸೋಮನಾಥ ದೇವಾಲಯ ಸಂಕೀರ್ಣದಲ್ಲಿ ಚಳಿಯನ್ನು ಲೆಕ್ಕಿಸದೆ ಸಾವಿರಾರು ಭಕ್ತರು ನೆರೆದಿದ್ದರು. ಬೆರಗುಗೊಳಿಸುವ ದೀಪಗಳು, ಪಟಾಕಿಗಳ ಸದ್ದು ಹಾಗೂ ಧಾರ್ಮಿಕ ಉತ್ಸಾಹದೊಂದಿಗೆ ಡ್ರೋನ್ ಪ್ರದರ್ಶನವು ಅಭೂತಪೂರ್ವ ಜನಸಮೂಹವನ್ನು ಆಕರ್ಷಿಸಿತು.

ಶನಿವಾರ ಸಂಜೆ ಮೋದಿ ಅವರು ಸೋಮನಾಥ ದೇವಾಲಯದಲ್ಲಿ 'ಓಂಕಾರ ಮಂತ್ರ' ಪಠಣಕ್ಕೆ ಸಾಕ್ಷಿಯಾಗಿದ್ದರು. ಬಳಿಕ 3 ಸಾವಿರ ಡ್ರೋನ್‌ಗಳು ಆಗಸದಲ್ಲಿ ಬಣ್ಣಬಣ್ಣದ ಕಲಾಕೃತಿಗಳ ಚಿತ್ತಾರಗಳನ್ನು ಬಿಡಿಸುವ ಮೂಲಕ ಎಲ್ಲರನ್ನು ರೋಮಾಂಚನಗೊಳಿಸಿದವು. ಸೋಮನಾಥ ದೇವಾಲಯ, ಸೌರಮಂಡಲ, ಶಿವಲಿಂಗ, ತ್ರಿಶೂಲ, ಓಂ, ಡಮರು... ಹೀಗೆ ವಿವಿಧ ಕಲಾಕೃತಿಗಳನ್ನು ಡ್ರೋನ್‌ಗಳು ನೀಲಿಯಾಗಸದಲ್ಲಿ ಮೂಡಿಸಿದವು.

'ಓಂ' ಎಂಬುದು ನಮ್ಮ ವೇದಗಳು, ಶಾಸ್ತ್ರಗಳು, ಪುರಾಣಗಳು, ಉಪನಿಷತ್ತುಗಳು ಮತ್ತು ವೇದಾಂತದ ಸಾರವಾಗಿವೆ. ಇದು ಧ್ಯಾನದ ಮೂಲ ಮತ್ತು ಯೋಗದ ಆಧಾರವಾಗಿವೆ. ಸಾಧನೆಯಲ್ಲಿ ಇದನ್ನೇ ಸಾಧಿಸಲಾಗುತ್ತದೆ. ಈ ಪದವು ಬ್ರಹ್ಮನ ಮೂರ್ತರೂಪವಾಗಿದೆ. ನಮ್ಮ ಮಂತ್ರವು 'ಓಂ'ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. ಸೋಮನಾಥ ಸ್ವಾಭಿಮಾನ ಪರ್ವದ ಸಂದರ್ಭದಲ್ಲಿ ನನಗೆ 1000 ಸೆಕೆಂಡುಗಳ ಕಾಲ ಓಂಕಾರ ನಾದದ ಸಾಮೂಹಿಕ ಪಠಣದಲ್ಲಿ ಭಾಗವಹಿಸುವ ಸೌಭಾಗ್ಯ ಸಿಕ್ಕಿತು' ಎಂದು ಮೋದಿ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಸೋಮನಾಥ ಸ್ವಾಭಿಮಾನ ಪರ್ವ'ದ ಸಂದರ್ಭದಲ್ಲಿ ಸೋಮನಾಥ ದೇವಾಲಯ ಸಂಕೀರ್ಣದಲ್ಲಿ ಭವ್ಯತೆ ಮತ್ತು ದೈವತ್ವದಿಂದ ತುಂಬಿದ ಡ್ರೋನ್ ಪ್ರದರ್ಶನವನ್ನು ನೋಡುವ ಸೌಭಾಗ್ಯ ನನಗೆ ಸಿಕ್ಕಿತು. ಈ ಅದ್ಭುತ ಪ್ರದರ್ಶನದಲ್ಲಿ, ನಮ್ಮ ಪ್ರಾಚೀನ ನಂಬಿಕೆಯೊಂದಿಗೆ ಆಧುನಿಕ ತಂತ್ರಜ್ಞಾನದ ಸಮನ್ವಯವು ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು. ಸೋಮನಾಥದ ಪವಿತ್ರ ಭೂಮಿಯಿಂದ ಹೊರಹೊಮ್ಮುವ ಈ ಬೆಳಕಿನ ಕಿರಣವು ಭಾರತದ ಸಾಂಸ್ಕೃತಿಕ ಶಕ್ತಿಯ ಸಂದೇಶವನ್ನು ಇಡೀ ಜಗತ್ತಿಗೆ ನೀಡುತ್ತಿದೆ' ಎಂದೂ ಅವರು ವಿವರಿಸಿದ್ದಾರೆ.

ಸೋಮನಾಥ ದೇವಾಲಯ ಮೇಲೆ ಮಹಮದ್ ಘಜ್ನಿ ದಾಳಿ ನಡೆಸಿ ಇಂದಿಗೆ ಒಂದು ಸಾವಿರ ವರ್ಷ ಹಾಗೂ ಹಾನಿಯಾದ ದೇವಾಲಯವನ್ನು ಮರು ನಿರ್ಮಿಸಿ 75 ವರ್ಷ ಕಳೆದ ನಿಮಿತ್ತ ದೇಶದಾದ್ಯಂತ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries