HEALTH TIPS

ಬೆಂಗಳೂರು ಅಲಯನ್ಸ್ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರಮಟ್ಟದ ತುಳು ವಿಚಾರ ಸಂಕಿರಣ

ಬೆಂಗಳೂರು: ತುಳುವಲ್ರ್ಡ್ ಫೌಂಡೇಶನ್, ಕಟೀಲು–ಮಂಗಳೂರು ಹಾಗೂ ಅಲಯನ್ಸ್ ವಿಶ್ವವಿದ್ಯಾನಿಲಯ ಮತ್ತು ತುಳುವ ಮಹಾಸಭೆ ಇಂಟನ್ರ್ಯಾಷನಲ್, ಬೆಂಗಳೂರು ಇವರ ಸಹಯೋಗದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ತುಳು ವಿಚಾರ ಸಂಕಿರಣವು ಜನವರಿ 9 ಮತ್ತು 10, 2026ರಂದು ಅಲಯನ್ಸ್ ವಿಶ್ವವಿದ್ಯಾನಿಲಯದ ಕ್ಯಾಂಪಸಿನಲ್ಲಿ ನಡೆಯಲಿದೆ.


ಈ ಸಂಕಿರಣದ ಮುಖ್ಯ ವಿಷಯವಾಗಿ “ತುಳುನಾಡಿನ ಆದಿಮೂಲ ದೈವೊಲು-ಬೆಮ್ಮೆರ್ ಬೊಕ್ಕ ಲೆಕ್ಕೇಸಿರಿ : ಮೂಲ ಪರಿಕಲ್ಪನೆಲೆನ್ ಮಿತ್ತ್ ಒಂಜಿ ಅಧ್ಯಯನ” ಎಂಬ ವಿಷಯವನ್ನು ಆಯ್ಕೆ ಮಾಡಲಾಗಿದ್ದು, ತುಳುನಾಡಿನ ಆದಿಮೂಲ ಸಂಸ್ಕøತಿ, ದೈವಪರಂಪರೆ, ಜನಪದ ನಂಬಿಕೆಗಳು ಹಾಗೂ ತಾತ್ವಿಕ ಅಂಶಗಳ ಕುರಿತು ಗಂಭೀರ ಶೈಕ್ಷಣಿಕ ಚರ್ಚೆಗಳು ನಡೆಯಲಿವೆ.

ಉದ್ಘಾಟನಾ ಸಮಾರಂಭವು ಜನವರಿ 9ರಂದು ಬೆಳಿಗ್ಗೆ 11.00 ಗಂಟೆಗೆ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಅಲಯನ್ಸ್ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಶಾನ್ ಪ್ರಿಸ್ಟ್ಲಿ ಬೋಆಜ್ ಉದ್ಘಾಟನೆ ಮಾಡಲಿದ್ದಾರೆ. ಉಪ ನೋಂದಣಾಧಿಕಾರಿ ಶ್ರೀಮತಿ ಸುರೇಖಾ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ತುಳು ಜನಪದ ತಜ್ಞರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿಕಟಪೂರ್ವ ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ್ರಾವಿಡಿಯನ್ ವಿಶ್ವವಿದ್ಯಾನಿಲಯ, ಕುಪ್ಪಂನ ತುಳು ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಬಿ. ಎಸ್. ಶಿವಕುಮಾರ್ ಹಾಗೂ ತುಳುವಲ್ರ್ಡ್ ಫೌಂಡೇಶನ್‍ನ ಮುಂಬೈ ವಕ್ತರರಾದ ಧರ್ಮಪಾಲ್ ಯು. ದೇವಾಡಿಗ ಭಾಗವಹಿಸಲಿದ್ದಾರೆ.

ಸಂಕಿರಣದ ಮೊದಲ ಅಧಿವೇಶನವು “ಬೆಮ್ಮೆರ್ ಮತ್ತು ಲೆಕ್ಕೇಸಿರಿ – ವಿವಿಧ ದೃಷ್ಟಿಕೋನಗಳು” ಎಂಬ ವಿಷಯದಡಿ ಮಧ್ಯಾಹ್ನ 2.00 ಗಂಟೆಗೆ ನಡೆಯಲಿದೆ. ಈ ಅಧಿವೇಶನಕ್ಕೆ ತುಳುವಲ್ರ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪೆÇ್ರ. ಪುರುಷೋತ್ತಮ ಬಳ್ಯಾಯ ಮಾರ್ಗದರ್ಶನ ಭಾಷಣ ನೀಡಲಿದ್ದು, ಡಾ. ವೈ. ಎನ್. ಶೆಟ್ಟಿ, ತುಳು ಜನಪದ ತಜ್ಞ ಮತ್ತು ಡಾ. ಬಿ. ಜನಾರ್ದನ ಭಟ್, ಸಾಹಿತ್ಯ ವಿಮರ್ಶಕ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.

ಎರಡನೇ ಅಧಿವೇಶನವು ಮಧ್ಯಾಹ್ನ 3.30 ಗಂಟೆಗೆ ನಡೆಯಲಿದ್ದು, ತುಳುವಲ್ರ್ಡ್ ಫೌಂಡೇಶನ್ ಉಪಾಧ್ಯಕ್ಷ ಡಾ. ನಿರಂಜನ್ ರೈ, ಉಪ್ಪಿನಂಗಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಅಧಿವೇಶನದಲ್ಲಿ ಡಾ. ಲಕ್ಷ್ಮಿ ಜಿ. ಪ್ರಸಾದ್, ಜನಪದ ಸಂಶೋಧಕಿ ಮತ್ತು ಡಾ. ಮಂಜುಳಾ ಪಿ. ಕಾಸರಗೋಡು ತಮ್ಮ ಸಂಶೋಧನಾ ವಿಚಾರಗಳನ್ನು ಮಂಡಿಸಲಿದ್ದಾರೆ.

ಜನವರಿ 10ರಂದು ಬೆಳಿಗ್ಗೆ 10.00 ಗಂಟೆಗೆ ಮೂರನೇ ಅಧಿವೇಶನ ನಡೆಯಲಿದ್ದು, ಮಂಗಳೂರು ಯುನಿವರ್ಸಿಟಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ. ಮಾಧವ ಎಂ. ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಈ ಅಧಿವೇಶನದಲ್ಲಿ ಡಾ. ಕಿಶೋರ್ ಕುಮಾರ್ ರೈ ಶೇಣಿ, ಶ್ರೀಮತಿ ಜಯಲಕ್ಷ್ಮಿ ಆರ್. ಶೆಟ್ಟಿ ಹಾಗೂ ಅರವಿಂದ ಬೆಲ್ಚಡ ಬಜ್ಪೆ ತಮ್ಮ ವಿಚಾರ ಮಂಡನೆ ನಡೆಸಲಿದ್ದಾರೆ.

ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ತುಳುವಲ್ರ್ಡ್ ಫೌಂಡೇಶನ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಖ್ಯಾತ ಲೇಖಕ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಅವರು ಸಮಾರೋಪ ಭಾಷಣ ನೀಡಲಿದ್ದಾರೆ.ಕಾರ್ಯಕ್ರಮದ ನಿರೂಪಣೆಯನ್ನು ನವೀನ್ ಶೆಟ್ಟಿ, ಎಡ್ಮೆಮಾರ್, ನಮ್ಮ ಟಿವಿ ನಿರ್ವಹಿಸಲಿದ್ದಾರೆ.  ಅಲ್ಲದೆ ತುಳು ಭಾಷೆ ಮತ್ತು ಸಂಸ್ಕೃತಿಗೆ ಕೊಡುಗೆ ನೀಡಿದ ಮಹಾನಿಯರನ್ನು v ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. 

ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಅಲಯನ್ಸ್ ವಿಶ್ವವಿದ್ಯಾನಿಲಯ ಮತ್ತು ತುಳುವಲ್ರ್ಡ್ ಫೌಂಡೇಶನ್ ಇವರ ಸಂಯುಕ್ತ ಪ್ರಮಾಣ ಪತ್ರ ಲಭಿಸಲಿದೆ.

ತುಳುನಾಡಿನ ಆದಿಮೂಲ ಸಂಸ್ಕೃತಿ, ದೈವಪರಂಪರೆ ಮತ್ತು ಜನಪದ ಅಧ್ಯಯನಗಳಿಗೆ ಹೊಸ ಶೈಕ್ಷಣಿಕ ದಿಕ್ಕು ನೀಡುವ ಈ ರಾಷ್ಟ್ರಮಟ್ಟದ ತುಳು ವಿಚಾರ ಸಂಕಿರಣಕ್ಕೆ ದೇಶದ ವಿವಿಧ ಭಾಗಗಳಿಂದ ವಿದ್ವಾಂಸರು, ಜನಪದ ಸಂಶೋಧಕರು, ಸಾಹಿತ್ಯ ಹಾಗೂ ಸಂಸ್ಕೃತಿ ಚಿಂತಕರು ಭಾಗವಹಿಸುತ್ತಾರೆ ಎಂದು ತುಳುವಲ್ರ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ, ಅಲಯನ್ಸ್ ವಿಶ್ವವಿದ್ಯಾನಿಲಯ ವಕ್ತರರಾದ ಡಾ. ಎ. ಎಂ. ಶ್ರೀಧರನ್, ಡಾ. ಶೃತಿ ಚಂದ್ರಶೇಖರ್ ಹಾಗೂ ದೇವೇಂದ್ರ ಹೆಗಡೆ ಕೋಕ್ರಾಡಿ (ಸಂಯೋಜಕರು, ತುಳುವ ಮಹಾಸಭೆ, ಬೆಂಗಳೂರು) ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries