ಮಂಜೇಶ್ವರ: ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಕುಂಟಿಕಾನ, ಮಂಗಳೂರು ಇವರಿಂದ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರಿ ಸೆಕೆಂಡರಿ ಶಾಲೆ, ಎಂಡೋಡಯಾಬ್ ಚಾರಿಟೇಬಲ್ ಸೊಸೈಟಿ, ಮಂಗಳೂರು, ವಿಕಾಸ ಮೀಯಪದವು ಇವರ ಸಹಕಾರದೊಂದಿಗೆ ಮೀಯಪದವು ಉನ್ನತ ಪ್ರೌಢ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರಗಿತು. ಶಿಬಿರವನ್ನು ಎ.ಜೆ. ಆಸ್ಪತ್ರೆಯ ವೈದ್ಯ ಡಾ.ಗಣೇಶ್ ಖಂಡಿಗೆ ಉದ್ಘಾಟಿಸಿದರು. ಶಾಲಾ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಖ್ಯಾತ ಎಂಡೋಕ್ರೈನೋಲಜಿಸ್ಟ್ ಡಾ. ಗಣೇಶ್ ಎಚ್.ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಿಬಿರದ ನೇತೃತ್ವ ವಹಿಸಿದ್ದರು.
ಮೀಂಜ ಗ್ರಾಮ ಪಂಚಾಯತಿ ಸದಸ್ಯ ಸಿದ್ದಿಕ್.ಕೆ.ಎಂ, ಶ್ರೀವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ ರಾವ್.ಆರ್.ಎ0. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ, ಪ್ರೌಢ ಶಾಲಾ ರಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಹೊನ್ನಕಟ್ಟೆ, ಶಾಲಾ ಮಾತೃ ಸಂಘದ ಅಧ್ಯಕ್ಷೆ ನಬೀಸತುಲ್ ಮಿಸ್ರಿಯ ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉದ್ಘಾಟಕರಾದ ಡಾ. ಗಣೇಶ್ ಖಂಡಿಗೆ ಅವರನ್ನು ಗೌರವಿಸಲಾಯಿತು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಮೃದುಲಾ ಸ್ವಾಗತಿಸಿ, ಹಿರಿಯ ಉಪನ್ಯಾಸಕ ರವಿಲೋಚನ ವಂದಿಸಿದರು. ಅಧ್ಯಾಪಕಿ ಸುಧಾ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರಾದ ಲಕ್ಷ್ಮೀಶ ಹಾಗೂ ಸುಧಾ ಪ್ರಾರ್ಥನೆ ಹಾಡಿದರು. ಸುಮಾರು 180 ಕ್ಕೂ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

.jpg)
