ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಏಪ್ರಿಲ್ 26 ರಿಂದ ಮೇ 2 ರ ತನಕ ಜರಗಲಿರುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಮಾತೃ ಸಮಿತಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಮಂತ್ರಿಸಿ ಆಶೀರ್ವಾದ ಪಡೆದರು. ಈ ಸಂದರ್ಭ
ಸಮಿತಿಯ ಅಧ್ಯಕ್ಷ ಕೆ.ಎನ್ ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಚೇತನ್ ಬಟ್ಟಂಬಾರೆ, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ರಂಜಿತ್ ಮನ್ನಿಪ್ಪಾಡಿ, ಗೋವಿಂದ ಕಾಳ್ಯಂಗಾಡು, ಮಾತೃ ಸಮಿತಿ ಉಪಾಧ್ಯಕ್ಷೆ ಜ್ಯೋತಿ ಸಂತೋಷ್ ಕಾಳ್ಯಂಗಾಡು, ಪ್ರಧಾನ ಕಾರ್ಯದರ್ಶಿ ದೀಪಾ ರಾಜೇಶ್ ಕಾಳ್ಯಂಗಾಡು ಜೊತೆಗಿದ್ದರು.


