ಮಂಜೇಶ್ವರ: ಪೈವಳಿಕೆ ಲಾಲ್ ಬಾಗ್ ಸಮೀಪದ ಮಾಸ್ಕುಮೇರಿ-ಕುರುಡಪದವು ರಸ್ತೆಯಲ್ಲಿ ಕಲ್ವರ್ಟ್ ಪುನಃ ನಿರ್ಮಾಣ ಕಾರ್ಯನಡೆಯುತ್ತಿರುವುದರಿಂದ, ಜನವರಿ 7 ರಿಂದ ಮಾರ್ಚ್ 6 ರವರೆಗೆ ಈ ರಸ್ತೆಯ ಮೂಲಕ ಹಾದುಹೋಗುವ ಎಲ್ಲಾ ವಾಹನಗಳು ಉಪ್ಪಳ-ಕನ್ಯಾನ ರಸ್ತೆಯ ಮೂಲಕವೇ ಹಾದು ಹೋಗಬೇಕು ಮತ್ತು ಕುರುಡಪದವಿನಿಂದ ಲಾಲ್‍ಬಾಗ್‍ಗೆ ಹೋಗುವ ವಾಹನಗಳು ಬಾಯಾರು ಪದವು- ಚಿಪ್ಪಾರು ವಿಷ್ಣುಮೂರ್ತಿ ದೈವಸ್ಥಾನ ಪಂಚಾಯತು ರಸ್ತೆಯ ಮೂಲಕ ಲಾಲ್‍ಬಾಗ್‍ಗೆ ಹಾದು ಹೋಗಬೇಕು ಎಂದು ಮಂಜೇಶ್ವರ ಮತ್ತು ಕಾಸರಗೋಡು ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗದ ಸಹಾಯಕ ಇಂಜಿನಿಯರ್ ತಿಳಿಸಿದ್ದಾರೆ.

