ಮಂಜೇಶ್ವರ: ಕೋಳ್ಯೂರು ಮಂಡಲ ಪೂಜೆ ಜಾತ್ರಾ ಮಹೋತ್ಸವ ಸಂದರ್ಭ ಕಿಶೋರ್ ಭಟ್ ಕೊಮ್ಮೆ ಕಥಾ ಸಂಯೋಜನೆಯಲ್ಲಿ ಯೋಗೀಶ ರಾವ್ ಚಿಗುರುಪಾದೆ ಪ್ರಸಂಗ ರಚಿಸಿರುವ 'ಕಾಲಾಗ್ನಿ ರುದ್ರ' ಪ್ರಸಂಗ ರಂಗಾರ್ಪಣೆಗೊಂಡು ಹವ್ಯಾಸಿ ಬಳಗ ಕೋಳ್ಯೂರು ತಂಡದಿಂದ ಪ್ರಥಮ ಪ್ರದರ್ಶನ ಶನಿವಾರ ನಡೆಯಿತು.
ವೇದಮೂರ್ತಿ ಬೋಳಂತಕೋಡಿ ರಾಮ ಭಟ್ ಪ್ರಸಂಗ ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು. ಸಮಾರಂಭದಲ್ಲಿ ಯಕ್ಷಗಾನ ರಂಗದ ವಿದ್ವಾಂಸ ರಾಜಗೋಪಾಲ ಭಟ್ ಕನ್ಯಾನ, ವಕೀಲ ವಿಠಲ ಭಟ್ ಮೊಗಸಾಲೆ, ಕೃಷ್ಣ ಭಟ್ ಚಕ್ರಕೋಡಿ ಉಪಸ್ಥಿತರಿದ್ದರು.
ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರ್ವಹಿಸಿ ಕಿಶೋರ್ ಭಟ್ ಕೊಮ್ಮೆ ವಂದಿಸಿದರು.

.jpg)
