ಬದಿಯಡ್ಕ: ಮಾರ್ಪನಡ್ಕದಲ್ಲಿರುವ ಕೇರಳ ಗ್ರಾಮೀಣ ಬ್ಯಾಂಕ್ ನೌಕರ ಹಾಗೂ ಕುಂಟಿಕಾನ ಶ್ರೀ ಭಾರತಾಂಬಾ ಸೇವಾಟ್ರಸ್ಟ್‍ನ ಸಕ್ರಿಯ ಸದಸ್ಯ ಸಾಮಾಜಿಕ ಕಾರ್ಯಕರ್ತ ನೀರ್ಚಾಲು ದೇವರಮೆಟ್ಟು ನಿವಾಸಿ ನಳಿನಾಕ್ಷನ್ ಅವರು ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ದುಬಾರಿ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ಕುಂಟಿಕಾನ ಶ್ರೀ ಭಾರತಾಂಬಾ ಸೇವಾಟ್ರಸ್ಟ್ ವತಿಯಿಂದ ಚಿಕಿತ್ಸೆಗೆ ನೆರವನ್ನು ಯಾಚಿಸಲಾಗಿತ್ತು. ಅನೇಕ ದಾನಿಗಳು ಸಹಕರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ದುರ್ಗಾ ಫ್ರೆಂಡ್ಸ್ ಕ್ಲಬ್ ಅಗಲ್ಪಾಡಿ ಇವರು ಸಂಗ್ರಹಿಸಿದ 16050 ರೂ.ಗಳನ್ನು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಹಾಗೂ ನೀರ್ಚಾಲು ವಾರ್ಡು ಸದಸ್ಯ ಶ್ಯಾಮಪ್ರಸಾದ ಸರಳಿ ಇವರ ಉಪಸ್ಥಿತಿಯಲ್ಲಿ ಶ್ರೀ ಭಾರತಾಂಬಾ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷ ಈಶ್ವರಚಂದ್ರ ಪ್ರಸಾದ ಕುಳಮರ್ವ ಅವರಿಗೆ ಹಸ್ತಾಂತರಿಸಲಾಯಿತು. ದುರ್ಗಾಫ್ರೆಂಡ್ಸ್ ಕ್ಲಬ್‍ನ ಪದಾಧಿಕಾರಿಗಳಾದ ರಾಜೇಶ್ ಮಾಸ್ತರ್ ಅಗಲ್ಪಾಡಿ, ಪ್ರಶಾಂತ್ ಪ್ರಯಾರಾಗ್, ದೀಕ್ಷಿತ್ ಅಗಲ್ಪಾಡಿ, ಸೂರ್ಯ ಕಜಮಲೆ, ಚಂದ್ರ ಪದ್ಮಾರು, ಕರುಣಾಕರ ಚೂರಿಕ್ಕೋಡು, ಉದಯ್ ಶಿವರಾಮ, ಮನಿಶ್ ರಾಜ್, ಗಿರೀಶ್ ಅಗಲ್ಪಾಡಿ, ಜಯಪ್ರಕಾಶ್, ಗಂಗಾಧರ ಮಣಿಯಾಣಿ ಉಪಸ್ಥಿತರಿದ್ದರು.

.jpg)
