ಮಲಪ್ಪುರಂ: "ತಿರುನವಾಯ ಮಹಾಮಕಂ (ಕುಂಭಮೇಳ) ಭಾರತಪುಳ ಪವಿತ್ರ ದಡದಲ್ಲಿ ಪುನರ್ಜನ್ಮ ಪಡೆದಾಗ, ಅಲ್ಲಿಗೆ ಬರುವ ಲಕ್ಷಾಂತರ ಭಕ್ತರ ಅನುಕೂಲವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಹೇಳಿದ್ದಾರೆ.
ತಿರುನವಾಯಕ್ಕೆ ಪ್ರಯಾಣವನ್ನು ಸುಗಮಗೊಳಿಸಲು ಕುಟ್ಟಿಪುರಂ ರೈಲು ನಿಲ್ದಾಣದಲ್ಲಿ ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅವಕಾಶ ನೀಡಬೇಕೆಂದು ಅನೇಕ ಭಕ್ತರು ಮತ್ತು ಸ್ಥಳೀಯರು ನನ್ನನ್ನು ಸಂಪರ್ಕಿಸಿದ್ದರು. ವಿನಂತಿಯನ್ನು ರೈಲ್ವೆ ಸಚಿವಾಲಯದ ಗಮನಕ್ಕೆ ತರಲಾಗಿದೆ ಮತ್ತು ತಕ್ಷಣವೇ ಅನುಕೂಲಕರ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದವರು ಸೂಚಿಸಿದರು.
ಕುಟ್ಟಿಪುರಂ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾದ ರೈಲುಗಳು:
1. 16355 ಅಂತ್ಯೋದಯ ಎಕ್ಸ್‍ಪ್ರೆಸ್ (ಜನವರಿ 24, 31) - ಸಮಯ: 03:34 ಎಎಂ
2. 12081 ಜನಶತಾಬ್ದಿ ಎಕ್ಸ್‍ಪ್ರೆಸ್ (ಜನವರಿ 24, 26, 31) - ಸಮಯ: 06:59 ಎಎಂ
3. 12685 ಚೆನ್ನೈ - ಮಂಗಳೂರು ಸೂಪರ್‍ಫಾಸ್ಟ್ (ಜನವರಿ 24, 25, 30, 31) - ಸಮಯ: 02:14 ಎಎಂ
ಭಾರತೀಯ ಸಂಸ್ಕøತಿಯ ಈ ಮಹಾನ್ ಸಂಗಮಕ್ಕೆ ಬರುವ ಎಲ್ಲರಿಗೂ ಸುರಕ್ಷಿತ ಮತ್ತು ಭಕ್ತಿಪೂರ್ವಕ ಪ್ರಯಾಣವನ್ನು ಹಾರೈಸುತ್ತೇನೆ ಎಮದು ಸುರೇಶ್ ಗೋಪಿ ತಿಳಿಸಿದ್ದಾರೆ.

