ಕೊಚ್ಚಿ: ಮಾಜಿ ಸಚಿವ ಮತ್ತು ಮುಸ್ಲಿಂ ಲೀಗ್ ರಾಜ್ಯ ಉಪಾಧ್ಯಕ್ಷ ವಿ.ಕೆ. ಇಬ್ರಾಹಿಂಕುಂಞÂ (73) ನಿಧನರಾದರು. ಅವರು ದೀರ್ಘಕಾಲದಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ 3:30 ಕ್ಕೆ ನಿಧನರಾದರು.
ಇಬ್ರಾಹಿಂಕುಂಞÂ್ಞ ಅವರ ರಾಜಕೀಯ ಚಟುವಟಿಕೆಗಳು ಮುಸ್ಲಿಂ ಲೀಗ್‍ನ ವಿದ್ಯಾರ್ಥಿ ಸಂಘಟನೆಯಾದ ಎಂಎಸ್‍ಎಫ್ ಮೂಲಕ ಪ್ರಾರಂಭವಾದವು. ನಂತರ, ಅವರು ಯೂತ್ ಲೀಗ್ ಮತ್ತು ಜಿಲ್ಲಾ ಮುಸ್ಲಿಂ ಲೀಗ್‍ನ ಪದಾಧಿಕಾರಿಯಾಗಿಯೂ ಕೆಲಸ ಮಾಡಿದರು. ಅವರು ಸತತವಾಗಿ ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿದ್ದರು.
ಅವರು ಕೊಚ್ಚಿನ್ ಇಂಟನ್ರ್ಯಾಷನಲ್ ಏರ್‍ಪೆÇೀರ್ಟ್ ಲಿಮಿಟೆಡ್‍ನ ನಿರ್ದೇಶಕ, ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ಗೋಶ್ರೀ ದ್ವೀಪ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಸದಸ್ಯ, ಗ್ರೇಟರ್ ಕೊಚ್ಚಿನ್ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಸದಸ್ಯ ಮುಂತಾದ ಹುದ್ದೆಗಳನ್ನು ಅಲಂಕರಿಸಿದ್ದರು. ಅವರು ಕೇರಳ ವಿಧಾನಸಭೆಯ ಭರವಸೆ ಸಮಿತಿಯ ಅಧ್ಯಕ್ಷರು, ಚಂದ್ರಿಕಾ ಪತ್ರಿಕೆಯ ನಿರ್ದೇಶಕರ ಮಂಡಳಿಯ ಸದಸ್ಯರು ಮತ್ತು ಕೊಚ್ಚಿ ಆವೃತ್ತಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು.

