HEALTH TIPS

ಹಳೆ ತಲೆಮಾರಿನವರು ನಿವೃತ್ತಿಯಾಗಬೇಕು; ಹೊಸಬರು ಅಧಿಕಾರ ವಹಿಸಿಕೊಳ್ಳಬೇಕು: ಗಡ್ಕರಿ

ನಾಗ್ಪುರ: 'ಹೊಸ ಪೀಳಿಗೆಯವರು ಅಧಿಕಾರ ವಹಿಸಿಕೊಳ್ಳಬೇಕು. ಎಲ್ಲವೂ ಸುಗಮವಾಗಿ ಸಾಗುವ ಹಂತದಲ್ಲಿ ಹಳೆ ತಲೆಮಾರಿನವರು ನಿವೃತ್ತಿಯಾಗಬೇಕು' ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ವಿದರ್ಭ-ಖಸ್ಡರ್‌ ಔದ್ಯೋಕ್‌ ಮಹೋತ್ಸವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, 'ಹಂತ ಹಂತವಾಗಿ ತಲೆಮಾರುಗಳು ಬದಲಾಗಬೇಕು.

ನಾವೂ ನಿವೃತ್ತಿ ಪಡೆದು, ಹೊಸ ತಲೆಮಾರಿಗೆ ಜಾಗ ಮಾಡಿಕೊಡಬೇಕು. ಎಲ್ಲವೂ ಸುಗಮವಾಗಿ ಸಾಗುವ ಹಂತದಲ್ಲಿ ನಾವು ಅಲ್ಲಿಂದ ಹೊರಬಂದು, ಹೊಸತೇನಾದರೂ ಮಾಡಬೇಕು' ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.

ಫೆ. 6ರಿಂದ 8ರವರೆಗೆ ನಡೆಯಲಿರುವ ವಿದರ್ಭ ಎಕ್ಸ್‌ಪೊಗೆ ಸಂಬಂಧಿಸಿದಂತೆ ಗಡ್ಕರಿ ಮಾತನಾಡಿದ್ದಾರೆ. ಇದನ್ನು ಆಯೋಜಿಸುತ್ತಿರುವ ಕೈಗಾರಿಕಾ ಅಭಿವೃದ್ಧಿ ಒಕ್ಕೂಟ(AID)ದ ಮುಖ್ಯ ಮಾರ್ಗದರ್ಶಕರಾಗಿ ಗಡ್ಕರಿ ಕೆಲಸ ಮಾಡುತ್ತಿದ್ದಾರೆ.

'ವಿದರ್ಭ ಪ್ರಾಂತ್ಯದಲ್ಲಿ ಬಹಳಷ್ಟು ಉತ್ತಮ ಕೈಗಾರಿಕೋದ್ಯಮಿಗಳು ಇದ್ದಾರೆ. ಈ ಮೂರು ದಿನಗಳ ಮೇಳದಲ್ಲಿ ವಿದರ್ಭವನ್ನು ದೇಶದ ಪ್ರಮುಖ ಕೈಗಾರಿಕಾ ಕ್ಷೇತ್ರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಸೇವಾ ವಲಯದ ಉದ್ಯಮಗಳು ಯಾವುದೇ ಪ್ರಾಂತ್ಯದ ಅಭಿವೃದ್ಧಿಗೆ ಪೂರಕ ಕ್ಷೇತ್ರಗಳು' ಎಂದು ಗಡ್ಕರಿ ಹೇಳಿದ್ದಾರೆ.

ವಿದರ್ಭ ಎಕ್ಸ್‌ಪೊನಲ್ಲಿ ಜವಳಿ, ಪ್ಲಾಸ್ಟಿಕ್, ಖನಿಜ, ಕಲ್ಲಿದ್ದಲ್ಲು, ವಿಮಾನಯಾನ, ಸರಕು ಸಾಗಣೆ, ಐಟಿ, ಆರೋಗ್ಯ ಕ್ಷೇತ್ರ, ಔಷಧ ಕ್ಷೇತ್ರ, ರಕ್ಷಣೆ, ರಿಯಲ್ ಎಸ್ಟೇಟ್, ನವೀಕರಣ ಇಂಧನ ಮತ್ತು ಸ್ಟಾರ್ಟ್‌ಅಪ್‌ಗಳು ಸೇರಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries