ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಮುಖ ವಿಷಯಗಳ ಕುರಿತು ಅವರ ಅರ್ಥಪೂರ್ಣ ವಿಚಾರಗಳು ಗಮನಾರ್ಹವಾಗಿವೆ. ಭಾರತದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಉತ್ಸಾಹವು ಅಷ್ಟೇ ಪ್ರಶಂಸನೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಯಕ್ಕೆ ಅನುದಾನ, ಅಭಿವೃದ್ದಿ ಯೋಜನೆಗಳ ಕುರಿತಾಗಿ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ. ಬಜೆಟ್‌ಗೂ ಮುನ್ನ ಈ ಭೇಟಿ ರಾಜ್ಯಕ್ಕೆ ಹೆಚ್ಚಿನ ಅನುದಾನದ ನಿರೀಕ್ಷೆ ಮೂಡಿದೆ.
My meetings with PM @narendramodi have always been very warm. The patience with which he listens to the development ideas I share with him, and his measured, wise responses to them are a reflection of his concern, understanding and humility. I thank him for his time. @PMOIndia

