ತಿರುವನಂತಪುರಂ: ಖ್ಯಾತ ಕಾದಂಬರಿಕಾರ, ಸಣ್ಣ ಕಥೆಗಾರ ಮತ್ತು ಭಾರತ್ ಭವನದ ಮಾಜಿ ಸದಸ್ಯ ಕಾರ್ಯದರ್ಶಿ ಸತೀಶ್ ಬಾಬು ಪಯ್ಯನ್ನೂರ್ ಮತ್ತು ನಾಟಕಕಾರ ಮತ್ತು ನಿರ್ದೇಶಕ ಪ್ರಶಾಂತ್ ನಾರಾಯಣ್ ಅವರ ಸಂಸ್ಮರಣೆ ಭಾರತ್ ಭವನದ ಶೆಮ್ಮಂಗುಡಿ ಸ್ಮೃತಿ ಮಂಟಪದಲ್ಲಿ ನಡೆಸಲಾಯಿತು. ಭಾರತ್ ಭವನದ ಸದಸ್ಯ ಕಾರ್ಯದರ್ಶಿ ಡಾ. ಪ್ರಮೋದ್ ಪಯ್ಯನ್ನೂರ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭವನ್ನು ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಕಾರ್ಯದರ್ಶಿ ಪ್ರಭಾವರ್ಮ ಉದ್ಘಾಟಿಸಿದರು.
ಡಾ. ಜಾರ್ಜ್ ಒನಕ್ಕೂರ್, ಪಿ.ಎಸ್. ಪ್ರದೀಪ್, ರಘುತ್ತಮನ್ ಮತ್ತು ಸಿ. ಅನೂಪ್ ಸಂಸ್ಮರಣಾ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ, ಭಾರತದಿಂದ ವಿಶ್ವ ಕ್ಯಾಲಿಗ್ರಫಿ ಅಸೋಸಿಯೇಷನ್‍ನ ಮೊದಲ ಅಧ್ಯಕ್ಷರಾಗಿ ನೇಮಕಗೊಂಡ ನಾರಾಯಣ ಭಟ್ಟತ್ತಿರಿ ಮತ್ತು 80 ವರ್ಷದ ಚಲನಚಿತ್ರ ವಿಮರ್ಶಕ ಎಂ.ಎಫ್. ಥಾಮಸ್ ಅವರನ್ನು ಭಾರತ್ ಭವನವು ಸನ್ಮಾನಿಸಿತು.
ಸತೀಶ್ ಬಾಬು ಅವರು ಪಯ್ಯನ್ನೂರು ಕಲಾಲಯ ಸಣ್ಣಕಥೆ ಸ್ಪರ್ಧೆಯಲ್ಲಿ ವಿಜೇತರಾದ ಶಾಹೀರ್ ಪುಳಿಕ್ಕಲ್, ಮೈಥಿಲಿ ಡಿ.ಎಸ್ ಮತ್ತು ಫಾ. ರಿನು ವರ್ಗೀಸ್ ಮ್ಯಾಥ್ಯೂ ಅವರನ್ನು ಬಹುಮಾನಗಳೊಮದಿಗೆ ಗೌರವಿಸಲಾಯಿತು. ಬಳಿಕ ಉಷಾ ವರ್ಮಾ ಅವರಿಂದ ಪೂತನಮೋಕ್ಷಂ ಕಥಕ್ಕಳಿ ಮತ್ತು ಫೆಮಿಲ್ಲಾ ಫೌಂಡೇಶನ್ ಪ್ರದರ್ಶಿಸಿದ ಗಮನಾರ್ಹ ಕಲಾಯ ನಾಟಕ ಯಜ್ಞಸೇನೆ ಪ್ರದರ್ಶನಗೊಂಡಿತು.

