HEALTH TIPS

ಚಲಿಸುತ್ತಿದ್ದ ಕಾರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಜೈಪುರ: ಪಿಯು ವಿದ್ಯಾರ್ಥಿನಿಯನ್ನು ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ದೂರು ನೀಡಿ ಎರಡು ದಿನ ಕಳೆದರೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ.

ಬೀಕಾನೇರ್‌ನ ನಾಪಾಸರ್‌ ಎಂಬಲ್ಲಿ ಜ.6ರಂದು ಘಟನೆ ನಡೆದಿದೆ. ವಿದ್ಯಾರ್ಥಿನಿಯ ಕುಟುಂಬದವರು ಜ.11ರಂದು ದೂರು ನೀಡಿದ್ದಾರೆ.

'ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇಲ್ಲಿಯವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ತನಿಖೆ ಮುಂದುವರಿದಿದೆ' ಎಂದು ಪೊಲೀಸರು ಸೋಮವಾರ ತಿಳಿಸಿದರು.

'ವಿದ್ಯಾರ್ಥಿನಿಯು ಬೆಳಿಗ್ಗೆ ಕಾಲೇಜಿಗೆ ತೆರಳಿದ್ದಳು. ಇಬ್ಬರು ಹುಡುಗರು ಆಕೆಯನ್ನು ಮಾರ್ಗಮಧ್ಯೆಯೇ, ನಿಲ್ಲಿಸಿ ಕಾರಿನಲ್ಲಿ ಅಪಹರಿಸಿದರು. ಬಳಿಕ, ಹಲವು ತಾಸುಗಳ ವರೆಗೆ ಊರಿನ ಸುತ್ತಲೂ ಕಾರು ಚಲಾಯಿಸಿದರು. ಚಲಿಸುತ್ತಿದ್ದ ಕಾರಿನಲ್ಲಿ ಸರದಿ ಮೇಲೆ ಅತ್ಯಾಚಾರ ಎಸಗಿದರು' ಎಂದು ದೂರಿನಲ್ಲಿ ತಿಳಿಸಲಾಗಿದೆ.

'ಪಕ್ಕದ ಊರಿಗೆ ಕಾರು ತಲುಪಿದಾಗ ಸ್ಥಳೀಯರಿಗೆ ಅನುಮಾನ ಮೂಡಿದೆ. ಆಗ, ಕಾರನ್ನು ಗ್ರಾಮಸ್ಥರು ತಡೆದು ನಿಲ್ಲಿಸಿದ್ದಾರೆ. ಆ ವೇಳೆ ವಿದ್ಯಾರ್ಥಿನಿಯನ್ನು ಕಾರಿನಿಂದ ತಳ್ಳಿದ ಹುಡುಗರು ಪರಾರಿಯಾಗಿದ್ದಾರೆ. ಬಳಿಕ, ವಿದ್ಯಾರ್ಥಿನಿಯ ಮನೆಯವರಿಗೆ ವಿಷಯ ತಿಳಿಸಲಾಗಿದೆ' ಎಂದು ಪೊಲೀಸರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries