ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಶನಿವಾರ ಮತ್ತೆ ಅಶಾಂತ ಸ್ಥಿತಿ ನಿರ್ಮಾಣವಾಯಿತು. ಪ್ರತಿಭಟನಕಾರರು ರಾಷ್ಟ್ರೀಯ ಹೆದ್ದಾರಿ ತಡೆದರು ಮತ್ತು ಬೆಲ್ದಾಂಗದಲ್ಲಿ ರೈಲು ತಡೆದು ಆಕ್ರೋಶ ಹೊರಹಾಕಿದರು.
ವಲಸೆ ಕಾರ್ಮಿಕರೊಬ್ಬರ ಸಾವು ಹಿನ್ನೆಲೆಯಲ್ಲಿ ಶುಕ್ರವಾರ ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಬರುವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಪ್ರತಿಭಟನಕಾರರು ಜಮಾಯಿಸಿದ್ದರು. ಇದರಿಂದ ಕಿಲೋ ಮೀಟರ್ ದೂರ ವಾಹನಗಳು ಸಾಲು ನಿಂತಿದ್ದವು. ಬಿಹಾರದಲ್ಲಿ ಇನ್ನೊಬ್ಬ ವಲಸೆ ಕಾರ್ಮಿಕನ ಮೇಲೆ ಹಲ್ಲೆ ನಡೆದಿದೆ ಎಂಬ ಮಾಹಿತಿ ಹರಡಿದ್ದರಿಂದ ಶನಿವಾರ ಪ್ರತಿಭಟನೆ ತೀವ್ರಗೊಂಡಿತು.
ಗುಂಪು ಚದುರಿಸಲು ಪೊಲೀಸರು ಕೆಲವೆಡೆ ಲಾಠಿ ಪ್ರಯೋಗ ಮಾಡಿದರು ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

