ಕಾಸರಗೋಡು: ಮನ್ನತ್ ಪದ್ಮನಾಭನ್ ಜಯಂತಿ ಜಯಂತಿ ಅಂಗವಾಗಿ ಜ. 2ರಂದು ಕೇರಳದಲ್ಲಿ ಸಾರ್ವಜನಿಕ ರಜೆ ಇರುವುದರಿಂದ ಅಂದು ನಡೆಯಬೇಕಾಗಿದ್ದ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸನ್ಸ್ )ಮತ್ತು ಕಲಿಕಾ ಪರವಾನಗಿ (ಲರ್ನೆರ್ಸ್ ಟೆಸ್ಟ್) ಪರೀಕ್ಷೆಗಳನ್ನು ಜನವರಿ 7ಕ್ಕೆ ಮುಂದೂಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

