ಪೆರ್ಲ : ಸೇರಾಜೆ ಸಮೀಪದ ಕಾನ ಶ್ರೀ ಮಲರಾಯಿ ಧೂಮಾವತೀ ಜಟಾಧಾರಿ ನಾಗ ಪರಿವಾರ ದೈವಸ್ಥಾನದ ಒಂಭತ್ತನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವ, ವಿಶೇಷವಾಗಿ ಶ್ರೀ ಮಲರಾಯಿ ದೈವದ ಪ್ರತಿಷ್ಠೆ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ಅವರ ನೇತೃತ್ವದಲ್ಲಿ ಜನವರಿ 18 ರಿಂದ 21ರ ತನಕ ಜರಗಲಿದೆ. ಕಾರ್ಯಕ್ರಮದಂಗವಾಗಿ ಜ.18 ರಂದು(ಇಂದು) ಸಂಜೆ ಗಂಟೆ 3ಕ್ಕೆ ಗೋಳಿತ್ತಾರು ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ,ಸಂಜೆ 5ಕ್ಕೆ ಕ್ಷೇತ್ರದ ತಂತ್ರಿಗಳಾದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಆಗಮನ, ಪೂರ್ಣಕುಂಭ ಸ್ವಾಗತ, ಸಂಜೆ 5.30ಕ್ಕೆ ಉಗ್ರಾಣ ಮುಹೂರ್ತ, 6ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 7.30 ರಿಂದ ಸಾಂಸ್ಕøತಿಕ ಸಂಭ್ರಮ, 8 ರಿಂದ ನೂತನ ದೈವಸ್ಥಾನದ ಪರಿಗ್ರಹಣ, ಆಚಾರ್ಯವರಣ, ಪ್ರಾಸಾದ ಶುದ್ಧಿ, ವಾಸ್ತುಹೋಮ, ಬಾಲಾಲಯದಲ್ಲಿ ಅನುಜ್ಞಾಕಲಶ, ಜಲಾಧಿವಾಸ, ಧಾನ ಕಲಶ ಪ್ರತಿಷ್ಠೆ, ಮಂಡಲ ಕಲಶ ರಚನೆ ಇತ್ಯಾದಿ ವೈದಿಕ ಕಾರ್ಯಕ್ರಮ ನಡೆಯಲಿದೆ.
ಜ.19 ಬೆಳಗ್ಗೆ ಗಂಟೆ 6.30ಕ್ಕೆ ಗಣಪತಿ ಹೋಮ, ಕಲಶಪೂಜೆ ಬೆಳಗ್ಗೆ 7.15 ರಿಂದ 8.21 ರ ಮಕರಲಗ್ನ ಶುಭಮುಹೂರ್ತದಲ್ಲಿ ಪುನರ್ ನಾಗ ಪ್ರತಿಷ್ಠೆ,
7.30 ರಿಂದ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಇವರಿಂದ ಭಜನೆ , 9ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಭಜನಾ ಸಮಿತಿ ಪೆರ್ಲ ಇವರಿಂದ ಭಜನೆ, ಪೂರ್ವಾಹ್ನ 10.45 ರಿಂದ 11.30 ರ ಮೀನಲಗ್ನ ಶುಭಮುಹೂರ್ತದಲ್ಲಿ ಶ್ರೀ ಮಲರಾಯ ದೈವದ ಪ್ರತಿಷ್ಠೆ ಮತ್ತು ಬ್ರಷ್ಕಕಲಶ ಅಭಿಷೇಕ, ನಿತ್ಯನೈಮಿತ್ತಿಕ ನಿರ್ಣಯ. ಬೆಳಗ್ಗೆ 11.30 ರಿಂದ ವೆಂಕಟ್ರಮಣ ದೇವರ ಹರಿಸೇವೆ, ದೈವಗಳಿಗೆ ತಂಬಿಲ,ಅಪರಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ,ಸಂಜೆಚ 3 ಗಂಟೆಗೆ ರಾಹುಗುಳಿಗ ಬನದಲ್ಲಿ ತಂಬಿಲ,ಸಂಜೆ ಗಂಟೆ 5ಗಂಟೆಗೆ ಪರಿವಾರ ದೈವಗಳ ಭಂಡಾರ ಇಳಿಯುವುದು. ಸಂಜೆ ಗಂಟೆ 6ಕ್ಕೆ ಸ್ಥಳ ಗುಳಿಗನ ಕೋಲ, ರಾತ್ರಿ 7 ರಿಂದ ಕಲ್ಲಾಲ್ದ ಗುಳಿಗನ ಕೋಲ, ರಾತ್ರಿ 7.30 ರಿಂದ ಗುರುಹಿರಿಯರಿಗೆ ಬಡಿಸುವುದು, ರಾತ್ರಿ 8ರಿಂದ ಅನ್ನಸಂತರ್ಪಣೆ, 9 ರಿಂದ ಮೂಕಾಂಬಿಕ ಗುಳಿಗ ಹಾಗೂ ಮೊಡ್ಚಾಮುಂಡಿ ದೈವದ ನೇಮ, ಪ್ರಸಾದ ವಿತರಣೆ ನಡೆಯಲಿದೆ. ಜ.20ಕ್ಕೆ ಬೆಳಿಗ್ಗೆ 7 ರಿಂದ ಶ್ರೀ ಮಲರಾಯಿ, ಧೂಮಾವತಿ ದೈವಗಳ ಭಂಡಾರ ಇಳಿಯುವುದು. ಬೆಳಿಗ್ಗೆ 8ಕ್ಕೆ ಶ್ರೀ ಮಲರಾಯಿ ದೈವದ ನೇಮೋತ್ಸವ, ಮಧ್ಯಾಹ್ನ 1ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ 2 ರಿಂದ ಶ್ರೀ ಧೂಮಾವತಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಸಂಜೆ 5ಕ್ಕೆ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ ಹಾಗೂ ಕೊರಗುತನಿಯ ದೈವಗಳ ಭಂಡಾರ ಇಳಿದು ರಾತ್ರಿ 8ಕ್ಕೆ ಅನ್ನಸಂತರ್ಪಣೆ, 9 ರಿಂದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತಿ ಹಾಗೂ ಕೊರಗುತನಿಯ ದೈವಗಳ ನೇಮೋತ್ಸವ, ಮರುದಿನ ಪ್ರಾತಃಕಾಲ ಪ್ರಸಾದ ವಿತರಣೆಯೊಂದಿಗೆ ಸಮಾಪ್ತಿಗೊಳ್ಳಲಿದೆ.

.jpg)
