ಬೆಳ್ಳುಳ್ಳಿ: ಬೆಳ್ಳುಳ್ಳಿಯ ಒಂದು ಎಸಳನ್ನು ಪುಡಿಮಾಡಿ ನಿಂಬೆ ರಸದೊಂದಿಗೆ ಬೆರೆಸಿ ನೆತ್ತಿಗೆ ಹಚ್ಚಿ. ಬೆಳ್ಳುಳ್ಳಿಯ ಬಲವಾದ ವಾಸನೆಯಿಂದಾಗಿ ಹೇನುಗಳು ಸಾಯಲು ಇದು ಸಹಾಯ ಮಾಡುತ್ತದೆ.
ಬೇಕಿಂಗ್ ಸೋಡಾ: ಸ್ವಲ್ಪ ಅಡಿಗೆ ಸೋಡಾವನ್ನು ಕಂಡಿಷನರ್‍ನೊಂದಿಗೆ ಬೆರೆಸಿ ತಲೆಗೆ ಹಚ್ಚಿ ಮೂವತ್ತು ನಿಮಿಷಗಳ ನಂತರ ಬಾಚಿಕೊಳ್ಳಿ. ನಂತರ ಕೂದಲನ್ನು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ.
ಬೇಬಿ ಎಣ್ಣೆ/ಬೇಬಿ ಪೌಡರ್: ತಲೆಗೆ ಬೇಬಿ ಎಣ್ಣೆಯನ್ನು ಹಚ್ಚಿ ರಾತ್ರಿಯಿಡೀ ಬಿಡಿ. ಬೆಳಿಗ್ಗೆ ಕೂದಲನ್ನು ಚೆನ್ನಾಗಿ ಬಾಚಿದರೆ ಹೇನುಗಳು ಉದುರುತ್ತವೆ.
ಉಪ್ಪು ಮತ್ತು ವಿನೆಗರ್: ಒಂದು ಚಮಚ ಉಪ್ಪು ಮತ್ತು ಒಂದು ಚಮಚ ವಿನೆಗರ್ ಬೆರೆಸಿ ತಲೆಗೆ ಮಸಾಜ್ ಮಾಡಿ. ಅರ್ಧ ಗಂಟೆಯ ನಂತರ ತಲೆ ತೊಳೆಯಿರಿ.
ನಿಂಬೆ ರಸ: ನಿಂಬೆ ರಸವನ್ನು ತಲೆಗೆ ಹಚ್ಚುವುದರಿಂದ ಹೇನುಗಳು ಸಾಯಲು ಸಹಾಯ ಮಾಡುತ್ತದೆ.
ನಿಂಬೆ ರಸವನ್ನು ತಲೆಗೆ ಹಚ್ಚುವುದರಿಂದ ಹೇನುಗಳು ಸಾಯುತ್ತವೆ.

