HEALTH TIPS

'ಶಕ್ತಿಯೊಂದಿಗೆ ನೆಗೆಯೋಣ': ವನಿತಾ ಆಯೋಗದ ಅಭಿಯಾನದ ಲೋಗೋ ಬಿಡುಗಡೆ

ತಿರುವನಂತಪುರಂ: ಕೇರಳ ಮಹಿಳಾ ಆಯೋಗ ಜಾರಿಗೆ ತಂದಿರುವ 'ಶಕ್ತಿಯೊಂದಿಗೆ ನೆಗೆಯೋಣ' ಅಭಿಯಾನದ ಲೋಗೋವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಡುಗಡೆ ಮಾಡಿದರು.

ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಆಯೋಗದ ಅಧ್ಯಕ್ಷೆ ಅಡ್ವ. ಪಿ ಸತಿದೇವಿ, ಸದಸ್ಯೆ ಅಡ್ವ. ಇಂದಿರಾ ರವೀಂದ್ರನ್, ಸದಸ್ಯ ಕಾರ್ಯದರ್ಶಿ ಕೆ ಹರಿಕುಮಾರ್ ಮತ್ತು ಇತರರು ಭಾಗವಹಿಸಿದ್ದರು. 


ಜೀವನದ ಬಿಕ್ಕಟ್ಟುಗಳನ್ನು ನಿವಾರಿಸಲು ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರ ಇಚ್ಛಾಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ 'ಶಕ್ತಿಯೊಂದಿಗೆ ಹಾರೋಣ' ಎಂಬ ಟ್ಯಾಗ್‍ಲೈನ್‍ನೊಂದಿಗೆ ರಾಜ್ಯದಾದ್ಯಂತ ಅಭಿಯಾನವನ್ನು ಆಯೋಜಿಸಲಾಗುತ್ತಿದೆ.

ಪ್ರಸಿದ್ಧ ನಟಿ ಮಂಜು ವಾರಿಯರ್ ಅಭಿಯಾನದ ರಾಯಭಾರಿಯಾಗಿದ್ದಾರೆ. ಮೊದಲ ಹಂತದಲ್ಲಿ, ರಾಜ್ಯದ ಮೂರು ಸ್ಥಳಗಳಲ್ಲಿ ವಿವಿಧ ಕ್ಷೇತ್ರಗಳ ಮಹಿಳೆಯರ ಭಾಗವಹಿಸುವಿಕೆಯೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ರಾಜ್ಯಮಟ್ಟದ ಉದ್ಘಾಟನೆಯನ್ನು ಈ ತಿಂಗಳ 19 ರಂದು (ಸೋಮವಾರ) ಮಧ್ಯಾಹ್ನ 3 ಗಂಟೆಗೆ ತಿರುವನಂತಪುರದ ವೈಲೋಪ್ಪಿಲ್ಲಿಯಲ್ಲಿರುವ ಸಂಸ್ಕøತಿ ಭವನದಲ್ಲಿ ಮಹಿಳಾ, ಮಕ್ಕಳ ಅಭಿವೃದ್ಧಿ ಮತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ನಡೆಸಲಿದ್ದಾರೆ.

ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಚಿವೆ ಡಾ. ಆರ್ ಬಿಂದು, ಹೈನುಗಾರಿಕೆ ಮತ್ತು ಪಶುಸಂಗೋಪನಾ ಸಚಿವೆ ಜೆ. ಚಿಂಜುರಾನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶರ್ಮಿಳಾ ಮೇರಿ ಜೋಸೆಫ್, ನಿರ್ದೇಶಕಿ ಹರಿತಾ ವಿ. ಕುಮಾರ್, ಜಿಲ್ಲಾಧಿಕಾರಿ ಅನುಕುಮಾರಿ, ಪೆÇಲೀಸ್ ಐಜಿಎಸ್ ಅಜಿತಾ ಬೀಗಮ್, ಆಯೋಗದ ಸದಸ್ಯರಾದ ಅಡ್ವ. ಇಂದಿರಾ ರವೀಂದ್ರನ್, ಅಡ್ವ. ಎಲಿಜಬೆತ್ ಮಾಮನ್ ಮಥಾಯಿ, ವಿ. ಆರ್. ಮಹಿಳಾಮಣಿ, ಅಡ್ವ. ಪಿ. ಕುಂಜೈಶಾ ಮುಂತಾದವರು ಭಾಗವಹಿಸಲಿದ್ದಾರೆ.

'ನಾವು ಹೇಗೆ ಹಾರಬಲ್ಲೆವು' ಎಂಬ ವಿಷಯದ ಕುರಿತು ಖ್ಯಾತ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಅವರು ತರಗತಿ ನಡೆಸಲಿದ್ದಾರೆ.

ಸರ್ಕಾರಿ ವಕೀಲರು, ಅಭಿಯೋಜಕರಾದ ಡಾ. ಟಿ. ಗೀನಾಕುಮಾರಿ, ಲಿಂಗ ಸಲಹೆಗಾರ ಡಾ. ಟಿ. ಕೆ. ಆನಂದಿ, ಬರಹಗಾರರಾದ ಡಾ. ಚಂದ್ರಮತಿ, ಎಚುಮುಕುಟ್ಟಿ, ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ ಸದಸ್ಯ ಡಾ. ಶಾಲಿಮಾ, ಆಯೋಗದ ಸದಸ್ಯರು, ನಿರ್ದೇಶಕಿ ಶಾಜಿ ಸುಗುಣನ್, ಕಾನೂನು ಅಧಿಕಾರಿ ಕೆ. ಚಂದ್ರಶೋಭಾ ಮತ್ತು ಇತರರು ಪ್ಯಾನೆಲಿಸ್ಟ್‍ಗಳಾಗಿರುತ್ತಾರೆ. ಇದರ ನಂತರ ಪ್ರಸಿದ್ಧ ಗಾಯಕ ಆರ್ಯ ದಯಾಳ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಆಯೋಗದ ಪ್ರಧಾನ ಕಚೇರಿ ಇರುವ ತಿರುವನಂತಪುರಂ ಮತ್ತು ಪ್ರಾದೇಶಿಕ ಕಚೇರಿಗಳಿರುವ ಕೋಝಿಕ್ಕೋಡ್ ಮತ್ತು ಎರ್ನಾಕುಲಂನಲ್ಲಿ ಒದಗಿಸಲಾದ ಉಚಿತ ಸಮಾಲೋಚನಾ ಸೌಲಭ್ಯಗಳನ್ನು ಮಹಿಳೆಯರು ಗರಿಷ್ಠವಾಗಿ ಬಳಸಿಕೊಳ್ಳಬೇಕೆಂದು ಆಯೋಗದ ಅಧ್ಯಕ್ಷರು ವಿನಂತಿಸಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries