ಶಬರಿಮಲೆ: ಶಬರಿಮಲೆಯಲ್ಲಿ ಭಕ್ತರ ದರ್ಶನ ಇಂದು (ಜನವರಿ 19) ರಾತ್ರಿ 10 ಗಂಟೆಗೆ ಕೊನೆಗೊಳ್ಳುತ್ತದೆ. ಜನವರಿ 19 ರಂದು ಸಂಜೆ 5 ಗಂಟೆಯವರೆಗೆ ಭಕ್ತರಿಗೆ ಪಂಪಾದಿಂದ ಹೊರಡಲು ಅವಕಾಶವಿರುತ್ತದೆ. ಭಾನುವಾರ ತುಪ್ಪಾಭಿಷೇಕ (ಜನವರಿ 18) ಕೊನೆಗೊಂಡಿತು. ಹರಿವರಾಸನಂ ಪಠಣದೊಂದಿಗೆ ದೇವಾಲಯವನ್ನು ಮುಚ್ಚಿದ ನಂತರ, ರಾಜ ಪ್ರತಿನಿಧಿಯ ಸಮ್ಮುಖದಲ್ಲಿ ಕುರುದಿ ಮಣಿಮಂಟಪ ವಿಧಾನ ಪ್ರಾರಂಭವಾಗುತ್ತದೆ.
ಜನವರಿ 20 ರಂದು, ರಾಜ ಪ್ರತಿನಿಧಿ ಮಾತ್ರ ಪಂದಳದಲ್ಲಿ ದರ್ಶನ ಪಡೆಯುತ್ತಾರೆ. ಗಣಪತಿ ಹೋಮದ ನಂತರ, ತಿರುವಾಭರಣಂ(ಪವಿತ್ರ ಆಭರಣ) ಹಿಂದಿರುಗುವ ಮೆರವಣಿಗೆ ಪಂದಳಂ ಶ್ರಂಪಿಕ್ಕಲ್ ಅರಮನೆಗೆ ಹೊರಡುತ್ತದೆ. ರಾಜ ಪ್ರತಿನಿಧಿಯ ದರ್ಶನದ ನಂತರ, ಮೇಲ್ಶಾಂತಿಯು ಅಯ್ಯಪ್ಪ ವಿಗ್ರಹಕ್ಕೆ ವಿಭೂತಿಯಾಭಿಷೇಕ ಮಾಡಿ, ಹರಿವರಾಸನ ಪಠಣದೊಂದಿಗೆ ದೇವಾಲಯವನ್ನು ಮುಚ್ಚುತ್ತಾರೆ.
ಬಳಿಕ ಬೀಗದ ಗೊಂಚಲನ್ನು ಮೇಲ್ಶಾಂತಿ ರಾಜಪ್ರತ್ನಿಧಿಗೆ ಹಸ್ತಾಂತರಿಸುವರು. 18 ನೇ ಮೆಟ್ಟಿಲು ಇಳಿದ ನಂತರ, ರಾಜಪ್ರತಿನಿಧಿ, ದೇವಸ್ವಂ ಮಂಡಳಿಯ ಪ್ರತಿನಿಧಿಗಳು ಮತ್ತು ಮೇಲ್ಶಾಂತಿಯವರ ಸಮ್ಮುಖದಲ್ಲಿ ಶಬರಿಮಲೆ ಆಡಳಿತ ಅಧಿಕಾರಿಗೆ ಕೀಲಿಕ್ಯೆ ಹಸ್ತಾಂತರಿಸಲಾಗುತ್ದೆ. ಮಾಸಿಕ ಪೂಜೆಯ ವೆಚ್ಚವನ್ನು ಪಾವತಿಸಿದ ನಂತರ, ಅವರು ಪಂದಳಂ ಅರಮನೆಗೆ ಹಿಂತಿರುಗುತ್ತಾರೆ.
ಶಬರಿಮಲೆ ದರ್ಶನಕ್ಕಾಗಿ ಸ್ಪಾಟ್ ಬುಕಿಂಗ್ ಕೌಂಟರ್‍ಗಳು ಇಂದು (ಜನವರಿ 19) ತೆರೆದಿರುತ್ತವೆ. ಈ ವೇಳೆ ಅಯ್ಯಪ್ಪ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಪಂಪಾ, ನೀಲಕ್ಕಲ್ ಮತ್ತು ಎರುಮೇಲಿಯಲ್ಲಿ ಸ್ಪಾಟ್ ಬುಕಿಂಗ್ ಸೌಲಭ್ಯಗಳು ಲಭ್ಯವಿದೆ. ಜನವರಿ 19 ರವರೆಗೆ ವರ್ಚುವಲ್ ಕ್ಯೂ ಬುಕಿಂಗ್ ಲಭ್ಯವಿದೆ. ಜನವರಿ 19 ರಂದು, ವರ್ಚುವಲ್ ಕ್ಯೂ ಮೂಲಕ 30,000 ಜನರಿಗೆ ಮತ್ತು ಸ್ಪಾಟ್ ಬುಕಿಂಗ್ ಮೂಲಕ 5,000 ಜನರಿಗೆ ಅವಕಾಶ ನೀಡಲಾಗುವುದು.

