ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮೈಸೂರು ಪ್ರಾದೇಶಿಕ ಸಮಿತಿಯನ್ನು ರೂಪಿಸಲಾಯಿತು.
ಮೈಸೂರಿನ ಸಜ್ಜೆಹುಂಡಿ ಹೊಂಬಾಳೇಶ್ವರ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಜರಗಿದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ವೇದಮೂರ್ತಿ ವೆಂಕಟೇಶ್ವರ ಭಟ್ ಕುಂಜಾರು ಹಾಗೂ ಅಧ್ಯಕ್ಷರಾಗಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನೊಂದಾವಣಾಧಿಕಾರಿ ಡಾ. ನವೀನ್ ಕುಮಾರ್ ಅವರನ್ನು ಆಯ್ಕೆಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಸಿದ್ದರಾಜು ಎಂ(ಗುಡ್ಡಪ್ಪ), ಪ್ರಧಾನ ಸಂಚಾಲಕರಾಗಿ ಪ್ರಶಾಂತ ಗುರೂಜಿ ಮೈಸೂರು, ಸದಸ್ಯರಾಗಿ ಸಿದ್ದರಾಮ, ಚಿನ್ನಸ್ವಾಮಿ, ಮಲ್ಲಣ್ಣ, ಗೋವಿಂದ, ರಾಮಣ್ಣ, ನಂಜಪ್ಪ, ಮಂಜುನಾಥ.ಸಿ ಆಯ್ಕೆಯಾದರು.


