ಮುಳ್ಳೇರಿಯ: ಯೇನೆಪೆÇೀಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಮತ್ತು ಬದರ್ ಜಮಾಅತ್ ಸಮಿತಿಯಡಿಯಲ್ಲಿ, ನಾರಂಪಾಡಿಯ ಬದರ್ ಚಾರಿಟಿ ಟ್ರಸ್ಟ್ ಜಂಟಿಯಾಗಿ ಮೆಗಾ ವೈದ್ಯಕೀಯ ಶಿಬಿರ ಆಯೋಜಿಸಿತ್ತು.
ಶಿಬಿರವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ಟಿ.ಎಂ.ಎ. ಖಾದರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷ ಅಬ್ದುಲ್ಲ ಕುಂಞÂ್ಞ ಶೇರಾಳ, ಜಿಲ್ಲಾ ಪಂಚಾಯತಿ ಸದಸ್ಯೆ ಜಸ್ನಾ ಮನಾಫ್, ಬ್ಲಾಕ್ ಪಂಚಾಯತಿ ಸದಸ್ಯ ಸಿ.ವಿ. ಜೇಮ್ಸ್, ಚೆಂಗಳ ಗ್ರಾಮ ಪಂಚಾಯತಿ ಸದಸ್ಯೆ ಮಿಸ್ರಿಯಾ ಟೀಚರ್ ಉಪಸ್ಥಿತರಿದ್ದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಎಂ.ಪಿ. ಉಮರ್ ಹಾಜಿ ಸ್ವಾಗತಿಸಿ, ವಂದಿಸಿದರು.
ಜಮಾಅತ್ ಖತೀಬ್ ಹಾಫಿಝ್ ಉಮರುಲ್ ಫಾರೂಕ್ ಉಸ್ತಾದ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ವೈದ್ಯಕೀಯ ಶಿಬಿರದಲ್ಲಿ ರೋಗಿಗಳನ್ನು ಪರೀಕ್ಷಿಸಿ ಉಚಿತ ಔಷಧಿಗಳನ್ನು ವಿತರಿಸಲಾಯಿತು. ತಜ್ಞ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಯೇನೆಪೆÇೀಯ ವೈದ್ಯಕೀಯ ಕಾಲೇಜಿಗೆ ಉಲ್ಲೇಖಿಸಲಾಯಿತು.

.jpg)
