HEALTH TIPS

ಬುರ್ಖಾ, ಮುಖಗವಸು ಹಾಕಿದವರು ವಾರಾಣಸಿಯಲ್ಲಿನ್ನು ಆಭರಣ ಖರೀದಿಸಲಾಗದು!

ವಾರಾಣಸಿ: ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಉತ್ತರ ಪ್ರದೇಶದ ಆಭರಣ ವ್ಯಾಪಾರಿಗಳ ಸಂಘದ ವಾರಾಣಸಿಯ ಸ್ಥಳೀಯ ಘಟಕವು ಬುರ್ಖಾ, ದುಪಟ್ಟಾ, ಮುಖಗವಸು ಅಥವಾ ಹೆಲ್ಮೆಟ್ ಧರಿಸಿದ ಗ್ರಾಹಕರಿಗೆ ಆಭರಣ ಮಾರಾಟ ಮಾಡುವುದನ್ನು ನಿಷೇಧಿಸಿದೆ.

ಹಲವಾರು ಜಿಲ್ಲೆಗಳಲ್ಲಿ ನಡೆದ ಕಳ್ಳತನ, ದರೋಡೆ ಮತ್ತು ವಂಚನೆಯ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

'ಮುಖ ಮುಚ್ಚಿಕೊಂಡಿರುವ ಗ್ರಾಹಕರಿಗೆ ನಾವು ಆಭರಣಗಳನ್ನು ಮಾರಾಟ ಮಾಡುವುದಿಲ್ಲ. ಮುಖ ಮುಚ್ಚಿಕೊಂಡಿರುವ ವ್ಯಕ್ತಿ ಅಪರಾಧ ಮಾಡಿದರೆ, ಅವರ ಗುರುತನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಇದಕ್ಕಾಗಿ, ನಾವು ನಮ್ಮ ಅಂಗಡಿಗಳ ಮುಂದೆ ಪೋಸ್ಟರ್‌ಗಳನ್ನು ಹಾಕಿದ್ದೇವೆ. ಅದರಲ್ಲಿ ಬುರ್ಖಾ, ದುಪಟ್ಟಾ, ಮುಖಗವಸು ಅಥವಾ ಹೆಲ್ಮೆಟ್ ಧರಿಸಿ ಅಂಗಡಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ' ಎಂದು ಅವರು ಹೇಳಿದ್ದಾರೆ.

ನಾವು ನಮ್ಮ ಅಂಗಡಿಗಳ ಸುರಕ್ಷತೆಯನ್ನು ಮಾತ್ರ ಬಯಸುತ್ತೇವೆ ಎಂದು ಸಿಂಗ್ ಹೇಳಿದರು. ಹಿಜಾಬ್ ಧರಿಸಿ ಆಭರಣ ಅಂಗಡಿಗೆ ಬರುವ ಗ್ರಾಹಕರು, ಅಂಗಡಿಗೆ ಪ್ರವೇಶಿಸುವಾಗ ಹಿಜಾಬ್ ತೆಗೆದು ಬರಬೇಕು ಎಂದಿದ್ದಾರೆ.

ಯುಪಿಜೆಎ ಅಧ್ಯಕ್ಷ ಸತ್ಯ ನಾರಾಯಣ್ ಸೇಠ್ ಮಾತನಾಡಿ, ವಾರಣಾಸಿಯಲ್ಲಿ ಸಾವಿರಾರು ಆಭರಣ ಅಂಗಡಿಗಳಿವೆ. ಝಾನ್ಸಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಆಭರಣ ವ್ಯಾಪಾರಿಗಳ ಅಂಗಡಿಗಳ ಮುಂದೆ ಇದೇ ರೀತಿಯ ಪೋಸ್ಟರ್‌ಗಳನ್ನು ಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಜನರು ಮುಖ ಮುಚ್ಚಿಕೊಳ್ಳುವುದರಿಂದ ಎಲ್ಲರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಘವು ಯಾವುದೇ ವ್ಯಕ್ತಿಯ ಧರ್ಮವನ್ನು ವಿರೋಧಿಸುತ್ತಿಲ್ಲ. ಇದನ್ನು ಆಭರಣ ವ್ಯಾಪಾರಿಗಳ ಸ್ವಂತ ಸುರಕ್ಷತೆಗಾಗಿ ಮಾತ್ರ ಮಾಡುತ್ತಿದ್ದೇವೆ. ಮುಸ್ಲಿಂ ಗ್ರಾಹಕರು ಬುರ್ಖಾ ಧರಿಸಿ ಬರಬಹುದು. ಆದರೆ, ಅವರ ಗುರುತನ್ನು ದೃಢೀಕರಿಸಲು ಅಂಗಡಿಗೆ ಪ್ರವೇಶಿಸುವ ಮೊದಲು ಅವರು ಅದನ್ನು ತೆಗೆದುಹಾಕಬೇಕು ಎಂದಿದ್ದಾರೆ.

ಇಲ್ಲಿನ ಲೋಹ್ತಾ ಪ್ರದೇಶದ ಆಭರಣ ವ್ಯಾಪಾರಿ ಶಾಹಿದ್, ಬುರ್ಖಾ ಧರಿಸಿದ ಗ್ರಾಹಕರಿಗೆ ಪ್ರವೇಶ ನಿರಾಕರಿಸುವುದು ತಪ್ಪು ಎಂದು ಹೇಳಿದರು. ಅಂತಹ ನಿರಾಕರಣೆ ಗ್ರಾಹಕರ ಸಂಖ್ಯೆಯನ್ನು ತಗ್ಗಿಸುತ್ತದೆ. ಬುರ್ಖಾ ಧರಿಸಿದ ಮಹಿಳೆಗೆ ಅದನ್ನು ತೆಗೆದುಹಾಕುವಂತೆ ಕೇಳುವುದು ಅವಮಾನಕರವಾಗಿರುತ್ತದೆ ಎಂದಿದ್ದಾರೆ.

ಬಿಹಾರದ ಮುಖ್ಯಮಂತ್ರಿ ಮಹಿಳೆಯ ಬುರ್ಖಾ ಎಳೆದ ಘಟನೆಯಂತೆ ಬುರ್ಖಾ ಧರಿಸಿ ಮಾಡಿದ ಕಳ್ಳತನವು ಒಂದು ಅಪವಾದವಾಗಿದೆ ಎಂದು ಅವರು ಹೇಳಿದ್ದಾರೆ.

'ಆಭರಣ ಅಂಗಡಿಯಲ್ಲಿ ಒಬ್ಬ ಮಹಿಳಾ ಉದ್ಯೋಗಿ ಇದ್ದರೆ, ಅವಳು ಆ ಮಹಿಳೆಯ ಮುಖವನ್ನು ನೋಡಬಹುದು. ಆದರೆ, ಪುರುಷ ಉದ್ಯೋಗಿ ಮಹಿಳೆಯ ಮುಖವನ್ನು ನೋಡಲು ಬುರ್ಖಾ ತೆಗೆಯಲು ಸಾಧ್ಯವಿಲ್ಲ. ಇದು ಸರಿಯಲ್ಲ' ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಸರ್ಕಾರಿ ವಕೀಲ ರಾಣಾ ಸಂಜೀವ್ ಸಿಂಗ್ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುತ್ತಾ, ಇದು ತಪ್ಪು ಕ್ರಮವಲ್ಲ ಎಂದು ಹೇಳಿದರು.

ಮಹಿಳೆಯರು ಬುರ್ಖಾ ಧರಿಸಿ ಆಭರಣ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿರುವ ಸಿಸಿಟಿವಿ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ರೀತಿಯ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಮುಸುಕಿನ ಕಾರಣದಿಂದಾಗಿ ಅವರ ಗುರುತನ್ನು ಸ್ಥಾಪಿಸಲು ಸಾಧ್ಯವಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರತಿಯೊಬ್ಬರಿಗೂ ತಮ್ಮದೇ ಆದ ಭದ್ರತೆಯ ಹಕ್ಕಿದೆ ಎಂದು ಹೇಳಿದ ಸಿಂಗ್, ಅದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries