ಕಾಸರಗೋಡು: ಗಣರಾಜ್ಯೋತ್ಸವದ ಅಂಗವಾಗಿ ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ಈಸ್ಟ್ ಯೂನಿಟ್ ನೇತೃತ್ವದಲ್ಲಿ ಮಧೂರು ಸನಿಹದ ಉಳಿಯ ಪರಕ್ಕಿಲ ಅಂಗನವಾಡಿ ಮಕ್ಕಳಿಗೆ ಕುರ್ಚಿಗಳ ವಿತರಣೆ ನಡೆಯಿತು.
ಮಧೂರು ಗ್ರಾಮ ಪಂಚಾಯಿತಿ ಸದಸ್ಯೆ ಸನೀಮಾ ಶೆರೀಫ್ ಸಮಾರಂಭದಲ್ಲಿ ಧ್ವಜಾರೋಹಣ ನಡೆಸಿ, ಶಾಲೆಗೆ ಕೊಡಮಾಡಲಾದ ಕುರ್ಚಿಗಳನ್ನು ಸ್ವೀಕರಿಸಿದರು. ಸಂಘಟನೆ ಈಸ್ಟ್ ಯೂನಿಟ್ ಅಧ್ಯಕ್ಷ ರಾಜಶೇಖರ್, ಕೋಶಾಧಿಕಾರಿ ಶ್ರೀಕಾಂತ್, ಘಟಕಗಳ ಪಿಆರ್‍ಒ ಮನೀಶ್ ಮತ್ತು ವಲಯ ಕೋಶಾಧಿಕಾರಿ ಅಜಿತ್ ಕುಮಾರ್ ಮೊದಲದವರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ವಿಮಲಾ ಯು ಸ್ವಾಗತಿಸಿ, ವಂದಿಸಿದರು.


