HEALTH TIPS

ರೈಲ್ವೆ ನಿವೃತ್ತ ಅಧಿಕಾರಿಗಳಿಗೆ ಚಿನ್ನ ಲೇಪಿತ ಪದಕ ನೀಡುವ ಸಂಪ್ರದಾಯಕ್ಕೆ ಕೊಕ್‌

ನವದೆಹಲಿ: ನಿವೃತ್ತ ಅಧಿಕಾರಿಗಳಿಗೆ ಚಿನ್ನ ಲೇಪಿತ ಬೆಳ್ಳಿ ಪದಕ ನೀಡುವ ಸಂಪ್ರದಾಯವನ್ನು ರೈಲ್ವೆ ಸಚಿವಾಲಯವು ಬುಧವಾರದಿಂದ ಕೈಬಿಟ್ಟಿದೆ.

'ಈಗಾಗಲೇ ಸಂಗ್ರಹಿಸಿರುವ/ ಲಭ್ಯವಿರುವ ಬೆಳ್ಳಿಯ ಪದಕಗಳನ್ನು ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು' ಎಂದು ಸಚಿವಾಲಯವು ರೈಲ್ವೆಯ ವಲಯ ಮುಖ್ಯಸ್ಥರು ಮತ್ತು ಉತ್ಪಾದನಾ ಘಟಕಗಳ ಮುಖ್ಯಸ್ಥರಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

ಆದರೆ ಬೆಳ್ಳಿ ಪದಕ ನೀಡುವ ಸಂಪ್ರದಾಯವನ್ನು ಕೈಬಿಟ್ಟಿರುವುದಕ್ಕೆ ಕಾರಣವನ್ನು ಅದು ನೀಡಿಲ್ಲ.

ಆದರೆ, ಹೊರಗುತ್ತಿಗೆ ಮಾರಾಟಗಾರರು ಪೂರೈಕೆ ಮಾಡುವ ಪದಕಗಳ ಗುಣಮಟ್ಟ ಕಳಪೆಯಾಗಿರುತ್ತಿತ್ತು. ಬೆಳ್ಳಿಯ ಬೆಲೆ ಹೆಚ್ಚಾಗಿರುವ ಕಾರಣ ಇತರೆ ವೆಚ್ಚವನ್ನು ಕಡಿತ ಮಾಡಲಾಗುತ್ತಿತ್ತು. ಈ ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.

ಪದಕವು ಶೇಕಡ 99.9ರಷ್ಟು ಪರಿಶುದ್ಧತೆಯ 20 ಗ್ರಾಂ ಬೆಳ್ಳಿಯನ್ನು ಒಳಗೊಂಡಿರುತ್ತಿತ್ತು.

'ಕೆಲವು ಪ್ರಕರಣಗಳಲ್ಲಿ ಮಾರಾಟಗಾರರು ಪೂರೈಸಿದ್ದ ಪದಕಗಳು ಕಳಪೆ ಗುಣಮಟ್ಟದ್ದಾಗಿದ್ದವು ಅಥವಾ ನಕಲಿ ಆಗಿದ್ದವು. ಹೀಗಾಗಿ ಪದಕ ನೀಡುವ ಸಂಪ್ರದಾಯವನ್ನೇ ಕೈಬಿಡಲಾಗಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries