ಕೊಟ್ಟಾಯಂ: ಮಾಜಿ ಗೃಹ ಸಚಿವ ಮತ್ತು ಕೊಟ್ಟಾಯಂ ಶಾಸಕ ತಿರುವಾಂಜೂರು ರಾಧಾಕೃಷ್ಣನ್ ಅವರಿಗೆ ವರ್ಚುವಲ್ ಬಂಧನ ಬೆದರಿಕೆ ಬಂದಿದೆ. ವಂಚಕರು ನಿಯಮಿತ ಕರೆಗಳು ಮತ್ತು ವಾಟ್ಸಾಪ್ ಆಡಿಯೋ ಮತ್ತು ವಿಡಿಯೋ ಕರೆಗಳ ಮೂಲಕ ತಿರುವಾಂಜೂರ್ ಅವರನ್ನು ಸಂಪರ್ಕಿಸಿದರು.
ಮುಂಬೈ ಪೋಲೀಸರ ಸೋಗಿನಲ್ಲಿ ವಂಚನೆ ಯತ್ನ ನಡೆದಿದೆ. ಘಟನೆಯಲ್ಲಿ ಡಿಜಿಪಿಗೆ ದೂರು ನೀಡಲಾಗಿದೆ ಎಂದು ತಿರುವಾಂಜೂರು ರಾಧಾಕೃಷ್ಣನ್ ಹೇಳಿದ್ದಾರೆ. ದೂರಿನ ಬಗ್ಗೆ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ತಿರುವಾಂಜೂರು ಅವರ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಪೋನ್ ಸಂಖ್ಯೆಯನ್ನು ಬಳಸಿಕೊಂಡು ಮುಂಬೈನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅಪರಾಧ ನಡೆದಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ತಾವು ಕರೆ ಮಾಡುತ್ತಿರುವುದಾಗಿ ಸೂಚಿಸಲಾಯಿತು. ಆದರೆ ತಿರುವಾಂಜೂರ್ ರಾಧಾಕೃಷ್ಣನ್ ಅವರು ಕರೆ ಮಾಡಿದಾಗ ಅದು ವಂಚನೆ ಎಂಬುದು ಸ್ಪಷ್ಟವಾಯಿತು ಎಂದು ಪ್ರತಿಕ್ರಿಯಿಸಿದರು. ಅವರು ಹೇಳಿದ್ದನ್ನ ಕೇಳಿದಾಗ ಅದು ವಂಚನೆ ಎಂದು ಅರಿತುಕೊಂಡೆ, ಸಂಭಾಷಣೆ ಹಿಂದಿ ಮತ್ತು ಇಂಗ್ಲಿಷ್ ಮಿಶ್ರಣವಾಗಿತ್ತು ಮತ್ತು ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ತಡೆಯಲು ದೂರು ದಾಖಲಿಸಿದ್ದೇನೆ ಎಂದು ತಿರುವಾಂಜೂರ್ ಸ್ಪಷ್ಟಪಡಿಸಿದರು.
ತಿರುವಾಂಜೂರ್ ಅವರ ಸಿಬ್ಬಂದಿ ಕರೆ ಮಾಡಿದವರಲ್ಲಿ ಒಬ್ಬರು ಪೋಲೀಸ್ ಅಧಿಕಾರಿಯಂತೆ ನಟಿಸುತ್ತಿರುವುದನ್ನು ನೋಡಿರುವುದಾಗಿ ಹೇಳಿರುವರು. ಕರೆ ಮಾಡಿದ ಸಂಖ್ಯೆ ಮತ್ತು ಸ್ಥಳವನ್ನು ಆಧರಿಸಿ ತನಿಖೆ ಆರಂಭಿಸಲಾಗಿದೆ ಎಂದು ಡಿಜಿಪಿ ಕಚೇರಿ ತಿಳಿಸಿದೆ. ಸೈಬರ್ ಸೆಲ್ ವಂಚನೆಯ ಬಗ್ಗೆ ತನಿಖೆ ನಡೆಸುತ್ತಿದೆ.

