HEALTH TIPS

ಹಲ್ ಸೆಟ್ ಅಗತ್ಯ ಇಲ್ಲ, ಮನುಷ್ಯನ ಬಾಯಲ್ಲಿ ಮತ್ತೆ ಹುಟ್ಟಲಿದೆ ಹಲ್ಲು!

ಹಲ್ಲಿಲ್ಲದ ಬಾರಿ ಕೇವಲ ಸೌಂದರ್ಯ ಹಾಳು ಮಾಡೋದಿಲ್ಲ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ. ಜಪಾನ್ ನಡೆಸುತ್ತಿರುವ ಸಂಶೋಧನೆಯೊಂದು ಹಲ್ಲಿಲ್ಲದ ಲಕ್ಷಾಂತರ ಜನರ ಜೀವನವನ್ನು ಬದಲಾಯಿಸುವ ಸಾಧ್ಯತೆ ಇದೆ.

ಐದರಿಂದ ಹತ್ತು ವರ್ಷದ ಮಕ್ಕಳಿಗೆ ಹಲ್ಲು ಉದುರಿ ಹೊಸ ಹಲ್ಲು ಬರುತ್ತೆ.

ಬಂದ ಹೊಸ ಹಲ್ಲು ಮತ್ತೆ ಮುರಿದ್ರೆ ಅಥವಾ ಹಾನಿಗೊಳಗಾದ್ರೆ ಮತ್ತೆ ಹುಟ್ಟೋದಿಲ್ಲ. ಭಾರತ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಲ್ಲಿನಲ್ಲಿ ಹುಳು ಇಲ್ಲವೆ ಮುರಿತ ಕಂಡು ಬಂದಾಗ ವೈದ್ಯರು ಹಲ್ಲು ತೆಗೆಯಲು ಸಲಹೆ ನೀಡ್ತಾರೆ. ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ ಹಲ್ಲಿನ ಬಗ್ಗೆ ಹೆಚ್ಚುವರಿ ಕಾಳಜಿವಹಿಸಿದ್ರೂ ಒಂದು ವಯಸ್ಸಾದ್ಮೇಲೆ ಹಲ್ಲು ದುರ್ಬಲಗೊಳ್ಳುತ್ತದೆ. ತಾನಾಗಿಯೇ ಬೀಳಲು ಶುರುವಾಗುತ್ತದೆ. ಬಚ್ಚ ಬಾಯಿ ಸೌಂದರ್ಯ ಹಾಳು ಮಾಡೋದ್ರಿಂದ ಜನರು ಕೆನ್ನೆ ತುಂಬಿಸಿಕೊಳ್ಳಲು ಹೊಸ ಹಲ್ಲಿನ ಮೊರೆ ಹೋಗ್ತಾರೆ.

ಇತ್ತೀಚಿನ ದಿನಗಳಲ್ಲಿ ಬರೀ ವೃದ್ಧರು ಮಾತ್ರವಲ್ಲ ಯುವಕರು ಕೂಡ ಹಲ್ಲು ಕೀಳಿಸ್ಕೊಂಡು ಹೊಸ ಹಲ್ಲನ್ನು ಅಳವಡಿಸಿಕೊಳ್ತಿದ್ದಾರೆ. ಹಲ್ಲಿಲ್ಲದ ಬಾಯಿ ಆಹಾರ ಸೇವನೆಗೆ ಅಡ್ಡಿ ಮಾಡುತ್ತೆ. ಇದೇ ಕಾರಣಕ್ಕೆ ಕೃತಕ ಹಲ್ಲು ಅನಿವಾರ್ಯವಾಗಿದೆ. ಕೃತಕ ಹಲ್ಲು, ಹಲ್ಲಿನ ಸಂಪೂರ್ಣ ಸೆಟ್ ಎಷ್ಟೇ ಸುರಕ್ಷಿತ ಅಂದ್ರೂ ಮೂಲ ಹಲ್ಲಿನ ಕಂಫರ್ಟ್ ನೀಡೋದಿಲ್ಲ.

ಮಾನವ ದೇಹ 206 ಮೂಳೆಗಳನ್ನು ಹೊಂದಿದೆ. ಮೂಳೆ ಮುರಿದಾಗ ಅವು ಸ್ವತಃ ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಆದ್ರೆ ಹಲ್ಲುಗಳು ಹಾಗಲ್ಲ. ಒಮ್ಮೆ ಹಲ್ಲು ಉದುರಿಹೋದರೆ ಅಥವಾ ಹಾನಿಗೊಳಗಾದರೆ ತಾನಾಗಿಯೇ ಮತ್ತೆ ಬೆಳೆಯುವುದಿಲ್ಲ.

ಹಲ್ಲು ಉದುರಿದ ಮೇಲೆ ಇಲ್ಲ ಹಾಳಾದ್ಮೇಲೆ ಹಲ್ಲನ್ನು ಕೀಳಿಸಿಕೊಂಡು ಹೊಸ ಹಲ್ಲು ಹಾಕಿಸಿಕೊಳ್ಳೋ ಪರಿಸ್ಥಿತಿ ಮುಂದೆ ಬರೋದಿಲ್ಲ. ಜಪಾನಿನ ವಿಜ್ಞಾನಿಗಳು ಭವಿಷ್ಯದಲ್ಲಿ ದಂತ ಆರೈಕೆಯ ಜಗತ್ತಿನಲ್ಲಿ ಮಹತ್ವದ ಪರಿವರ್ತನೆಗೆ ಪ್ರಯತ್ನ ನಡೆಸ್ತಿದ್ದಾರೆ. ಮಾನವರ ಮೇಲೆ ಹಲ್ಲಿನ ಪುನಃ ಬೆಳವಣಿಗೆಯ ಔಷಧವನ್ನು ಪರೀಕ್ಷಿಸುತ್ತಿದ್ದಾರೆ.

ಒಸಾಕಾದ ಕಿಟಾನೊ ಆಸ್ಪತ್ರೆಯ ದಂತ ಸಂಶೋಧನಾ ಮುಖ್ಯಸ್ಥ ಡಾ. ಕಟ್ಸು ಟಕಹಾಶಿ ನೇತೃತ್ವದಲ್ಲಿ ಈ ಪ್ರಯೋಗ ನಡೆದಿದೆ. ಸೆಪ್ಟೆಂಬರ್ 2024 ರಲ್ಲಿ ಸಂಶೋಧನೆ ಪ್ರಾರಂಭವಾಯಿತು. 11 ತಿಂಗಳುಗಳ ಕಾಲ ಪ್ರಯೋಗ ನಡೆದಿದೆ. ಇದ್ರಲ್ಲಿ 30 ರಿಂದ 64 ವರ್ಷ ವಯಸ್ಸಿನ 30 ಪುರುಷರು ಪಾಲ್ಗೊಂಡಿದ್ದರು. ಅವರಿಗೆ ಕನಿಷ್ಠ ಒಂದು ಹಲ್ಲು ಇರಲಿಲ್ಲ. ಸುರಕ್ಷತೆ ಮತ್ತು ಪರಿಣಾಮ ಎರಡನ್ನೂ ಪರೀಕ್ಷಿಸಲು ಔಷಧವನ್ನು ಅಭಿದಮನಿ ಮೂಲಕ ನೀಡಲಾಗಿತ್ತು.

ಈ ಸಂಶೋಧನೆ USAG-1 ಎಂಬ ಪ್ರತಿಕಾಯವನ್ನು ಆಧರಿಸಿದೆ. ಇದು ಹಲ್ಲಿನ ಬೆಳವಣಿಗೆಯನ್ನು ತಡೆಯುತ್ತದೆ. ಕ್ಯೋಟೋ ವಿಶ್ವವಿದ್ಯಾಲಯದ ವಿಜ್ಞಾನಿಗಳು USAG-1 ಮತ್ತು BMP ನಡುವಿನ ಪರಸ್ಪರ ಕ್ರಿಯೆಯನ್ನು ನಿರ್ಬಂಧಿಸುವ ನಿರ್ದಿಷ್ಟ ಮೊನೊಕ್ಲೋನಲ್ ಪ್ರತಿಕಾಯವನ್ನು ಅಭಿವೃದ್ಧಿಪಡಿಸಿದರು. ಪ್ರಾಣಿಗಳ ಪರೀಕ್ಷೆಗಳಲ್ಲಿ ಹಲ್ಲುಗಳ ಮರುಬೆಳವಣಿಗೆ ಗಮನಿಸಲಾಗಿದೆ.

ಈ ಪ್ರಯೋಗ ಯಶಸ್ವಿಯಾದ ನಂತ್ರ, ಮುಂದಿನ ಹಂತ ಮಕ್ಕಳ ಮೇಲೆ ನಡೆಯಲಿದೆ. ನಾಲ್ಕು ಅಥವಾ ಹೆಚ್ಚಿನ ಹಲ್ಲುಗಳನ್ನು ಕಳೆದುಕೊಂಡಿರುವ 2 ರಿಂದ 7 ವರ್ಷ ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುತ್ತದೆ. ವಿಜ್ಞಾನಿಗಳು 2030 ರ ವೇಳೆಗೆ ಹಲ್ಲಿನ ಮರುಬೆಳವಣಿಗೆ ಚಿಕಿತ್ಸೆಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದ್ದಾರೆ. ಈ ಔಷಧ ಯಶಸ್ವಿಯಾದರೆ, ಇದು ದಂತ ವಿಜ್ಞಾನದಲ್ಲಿ ಅತಿದೊಡ್ಡ ಕ್ರಾಂತಿಯಾಗಲಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries