ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿ ಕೊಡ್ಲಮೊಗರು ಸುಳ್ಯಮೆಯಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ನಡೆಯುತ್ತಿದ್ದಲ್ಲಿಗೆ ಮೂವರನ್ನು ಬಂಧಿಸಿದ್ದಾರೆ. ಮಂಗಳೂರು ಕುಂಪಲ ಲಕ್ಷ್ಮೀಗುಡ್ಡೆ ನಿವಾಸಿ ಮಲ್ಲಿಕಾರ್ಜುನ (65), ತೊಕ್ಕೊಟ್ಟಿನ ಬಾಡಿಗೆ ಮನೆಯಲ್ಲಿ ವಾಸಿಸುವ ಎಸ್. ಗಣೇಶ್ (49), ವರ್ಕಾಡಿ ಬಾಕ್ರಬಯಲಿನ ಜನಾರ್ದನ (67)ಬಂಧಿತರು. ಮಂಜೇಶ್ವರ ಠಾಣೆ ಎಸ್. ಐ. ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಜೂಜಾಟಕ್ಕೆಬಳಸಿದ್ದರೆನ್ನಲಾದ 3220ರೂ. ನಗದು ಹಾಗೂ ಅಂಕಕ್ಕೆ ಬಳಸಿದ್ದ ಕೋಳಿಯನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಖಚಿತ ಸುಳಿವಿನ ಹಿನ್ನೆಲೆಯಲ್ಲಿ ಪೆÇಲೀಸರು ಸುಳ್ಯಮೆಯ ಶೇಂದಿ ಅಂಗಡಿ ವಠಾರದಲ್ಲಿ ಜೂಜಿನೊಂದಿಗೆ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ್ದರು. ಪೊಲೀಸರು ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿದ್ದ ಇತರರು ಓಡಿಪರಾರಿಯಾಗಿದ್ದಾರೆ. ಕಳೆದ ಎರಡು ವಾರದಲ್ಲಿ ಮಂಜೇಶ್ವರ ಠಾಣೆ ಪೊಲೀಸರು ನಾಲ್ಕು ಕಡೆ ಕೋಳಿ ಅಂಕಕ್ಕೆ ದಾಳಿ ನಡೆಸಿ ನಗದು, ಕೋಳಿ, ಕೋಳಿ ಬಾಳನ್ನು ವಶಪಡಿಸಿಕೊಂಡು ಹತ್ತು ಮಂದಿಯನ್ನು ಬಂಧಿಸಿದ್ದರು. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಗಡಿಭಾಗದಲ್ಲಿ ವ್ಯಾಪಕವಾಗಿ ಕೋಳಿ ಅಂಕ ನಡೆಯುತ್ತಿದ್ದು, ದ. ಕ ಜಿಲ್ಲೆಯಿಂದಲೂ ಹೆಚ್ಚಿನ ಜನರು ಕೋಳಿ ಅಂಕದಲ್ಲಿ ಭಾಗವಹಿಸುತ್ತಿದ್ದು, ಪೆÇೀಲೀಸರು ವ್ಯಾಪಕ ದಾಳಿಗೆ ಮುಂದಾಗಿದ್ದಾರೆ.

