HEALTH TIPS

ಅಜಂತಾ-ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಇಳಯರಾಜಗೆ ಪದ್ಮಪಾಣಿ ಪ್ರಶಸ್ತಿ

ಛತ್ರಪತಿ ಸಂಭಾಜಿನಗರದಲ್ಲಿ ಜನವರಿ 28 ರಿಂದ ಫೆಬ್ರುವರಿ 4ರವರೆಗೆ ನಡೆಯಲಿರುವ ಅಜಂತಾ-ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಸಿದ್ಧ ಸಂಗೀತ ಸಂಯೋಜಕ ಇಳಯರಾಜಅವರಿಗೆ ಪದ್ಮಪಾಣಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಶಸ್ತಿ ಆಯ್ಕೆ ಮಂಡಳಿಯಲ್ಲಿ ಲತಿಕಾ ಪಡ್‌ಗಾಂಕರ್, ನಿರ್ಮಾಪಕರಾದ ಅಶುತೋಷ್ ಗೋವಾರಿಕರ್, ಸುನಿಲ್ ಸುಕ್ತಂಕರ್ ಮತ್ತು ಚಂದ್ರಕಾಂತ್ ಕುಲಕರ್ಣಿ ಇದ್ದರು. ಇವರ ಸಮ್ಮುಖದಲ್ಲಿ ಇಳಯರಾಜ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇಳಯರಾಜ ಅವರಿಗೆ ಪದ್ಮಪಾಣಿ ಸ್ಮರಣಿಕೆಯ ಜೊತೆಗೆ, ಗೌರವ ಪ್ರಮಾಣ ಪತ್ರ ಹಾಗೂ ₹2 ಲಕ್ಷ ನಗದನ್ನು ಬಹುಮಾನವಾಗಿ ನೀಡಲಾಗುತ್ತದೆ. ಈ ಹಿಂದೆ ಜಾವೇದ್ ಅಖ್ತರ್, ಹಿರಿಯ ನಿರ್ದೇಶಕ ಹಾಗೂ ಲೇಖಕ ಸಾಯಿ ಪರಾಂಜಪೆ ಮತ್ತು ನಟ ಓಂ ಪುರಿ ಸೇರಿದಂತೆ ಹಲವರು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಇಳಯರಾಜ ಅವರ ಸಾಧನೆ

ಇಳಯರಾಜ ಅವರು ಐದು ದಶಕಗಳಿಗೂ ಹೆಚ್ಚು ಕಾಲ ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. 7,000ಕ್ಕೂ ಹೆಚ್ಚು ಹಾಡುಗಳನ್ನು ಮತ್ತು 1,500ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಮೂಲ ಸಂಗೀತ ಸಂಯೋಜಿಸಿದ್ದಾರೆ. ಇವರು ಮುಖ್ಯವಾಗಿ ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಮರಾಠಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಂಗೀತವನ್ನು ಸಂಯೋಜಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries