ಪತ್ತನಂತಿಟ್ಟ: ಮಕರ ಬೆಳಕು ದಿನದಂದು ಶಬರಿಮಲೆ ಸನ್ನಿಧಾನಂನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂಬ ದೂರಿನ ಮೇರೆಗೆ ದೇವಸ್ವಂ ವಿಜಿಲೆನ್ಸ್ ತನಿಖೆ ಆರಂಭಿಸಿದೆ.
ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್ ಅವರು ದೇವಸ್ವಂ ವಿಜಿಲೆನ್ಸ್ ಎಸ್‍ಪಿಗೆ ನಿರ್ದೇಶನ ನೀಡಿದ್ದಾರೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಿರ್ದೇಶಕ ಅನುರಾಜ್ ಮನೋಹರ್ ಅವರ ಹೊಸ ಚಿತ್ರಕ್ಕಾಗಿ('ನರಿವೆಟ್ಟ') ಶಬರಿಮಲೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ವರದಿಯಾಗಿದೆ.
ಮಕರವಿಳಕ್ಕು ದರ್ಶನದ ಸಮಯದಲ್ಲಿ ಸನ್ನಿಧಾನದಲ್ಲಿ ಚಿತ್ರೀಕರಣಕ್ಕೆ ನಿರ್ದೇಶಕರು ಅನುಮತಿ ಕೋರಿದ್ದರೂ, ದೇವಸ್ವಂ ಮಂಡಳಿ ಅದನ್ನು ನಿರಾಕರಿಸಿತ್ತು. ಆದರೆ ಇದನ್ನು ತಪ್ಪಿಸಿ ಚಿತ್ರೀಕರಣ ಮಾಡಲಾಗಿದೆ ಎಂಬುದು ದೂರು.
ಆದಾಗ್ಯೂ, ನಿರ್ದೇಶಕ ಅನುರಾಜ್ ಮನೋಹರ್ ಅವರು ಸನ್ನಿಧಾನದಲ್ಲಿ ಚಿತ್ರೀಕರಣ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು. ಚಿತ್ರದ ಹಿನ್ನೆಲೆ ಪಂಪಾ ಮತ್ತು ಚಿತ್ರೀಕರಣ ಅಲ್ಲಿ ನಡೆದಿದೆ ಎಂಬುದು ಅವರುÀ ವಿವರಣೆ ನೀಡಿರುವರು. ಸನ್ನಿಧಾನದಲ್ಲಿ ಪತ್ರಕರ್ತರು ನಿಂತಿದ್ದ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಅನುಮತಿ ಕೋರಲಾಗಿದ್ದರೂ, ಮಂಡಳಿಯ ಅಧ್ಯಕ್ಷರು ಅದನ್ನು ನಿರಾಕರಿಸಿದರು. ನಂತರ, ಸನ್ನಿಧಾನದಲ್ಲಿ ಎಡಿಜಿಪಿ ಎಸ್ ಶ್ರೀಜಿತ್ ಅವರನ್ನು ಭೇಟಿಯಾದಾಗ,ಅವರ Àೂಚನೆಯಂತೆ ಪಂಪಾದಲ್ಲಿ ಚಿತ್ರೀಕರಣ ಮಾಡಿರುವುದಾಗಿ ಮತ್ತು ತನಿಖೆ ನಡೆಸಬಹುದೆಂದು ನಿರ್ದೇಶಕರು ಹೇಳಿರುವರು.

