ಕೊಚ್ಚಿ: ಕೇರಳ ಹೈಕೋರ್ಟ್‍ನ ಮಾಜಿ ನ್ಯಾಯಾಧೀಶ ಮತ್ತು ಕೊಚ್ಚಿಯ ರಾಷ್ಟ್ರೀಯ ಸುಧಾರಿತ ಕಾನೂನು ಅಧ್ಯಯನ ವಿಶ್ವವಿದ್ಯಾಲಯದ (ಎನ್.ಯು.ಎ.ಎಲ್.ಎಸ್) ಹಂಗಾಮಿ ಉಪಕುಲಪತಿ ನ್ಯಾಯಮೂರ್ತಿ ಎಸ್. ಸಿರಿ ಜಗನ್ ನಿಧನರಾದರು. ಕಳೆದ ಮೂರು ವಾರಗಳಿಂದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಕೊಲ್ಲಂನ ಮಯ್ಯನಾಡ್ ಮೂಲದವರು.
ಅವರು 2005 ರಿಂದ 2014 ರವರೆಗೆ ಕೇರಳ ಹೈಕೋರ್ಟ್‍ನ ನ್ಯಾಯಾಧೀಶರಾಗಿದ್ದರು. ಈ ಅವಧಿಯಲ್ಲಿ, ಅವರು ಸ್ವಯಂಪ್ರೇರಿತವಾಗಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ದಾಖಲಿಸಿದ್ದರು. ನಿವೃತ್ತಿಯ ನಂತರವೂ, ಅವರು ವಿವಿಧ ಪ್ರಮುಖ ಸಮಿತಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೀದಿ ನಾಯಿ ಸಮಸ್ಯೆಗೆ ಪರಿಹಾರ ನೀಡುವ ಕುರಿತು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ಅಧ್ಯಕ್ಷರೂ ಆಗಿದ್ದರು. ಕೇರಳ ಹೈಕೋರ್ಟ್ ನೇಮಿಸಿದ ಶಬರಿಮಲೆ ಹೈ ಪವರ್ ಸಮಿತಿಯ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

