ಕಣ್ಣೂರು: ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಎಸ್.ಎಫ್.ಐ.- ಡಿ.ವೈ.ಎಫ್.ಐ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ನಡೆದಿದೆ. ಪೋಸ್ಟರ್ ಹಾನಿಗೊಳಿಸಲಾಗಿದೆ ಎಂಬ ಆರೋಪದ ಮೇಲೆ ಯುವ ಕಾಂಗ್ರೆಸ್ ನಡೆಸಿದ ಮೆರವಣಿಗೆ ಸಂದರ್ಭದಲ್ಲಿ ಘರ್ಷಣೆ ನಡೆಯಿತು.
ಹುತಾತ್ಮರ ನಿಧಿ ವಂಚನೆಯ ಬಗ್ಗೆ ಪಯ್ಯನ್ನೂರಿನ ಮಾಜಿ ಪ್ರದೇಶ ಕಾರ್ಯದರ್ಶಿ ಮತ್ತು ಜಿಲ್ಲಾ ಸಮಿತಿ ಸದಸ್ಯ ಪಿ. ಉಣ್ಣಿಕೃಷ್ಣನ್ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ, ಪಯ್ಯನ್ನೂರಿನಲ್ಲಿ ಸತ್ಯಾಗ್ರಹ ನಡೆಸಲು ಕಾಂಗ್ರೆಸ್ ಯೋಜಿಸುತ್ತಿದೆ. ಈ ಸಂಬಂಧ ನಗರದಲ್ಲಿ ಹಾಕಲಾದ ಪೋಸ್ಟರ್‍ಗಳನ್ನು ಎಸ್.ಎಫ್.ಐ.- ಡಿ.ವೈ.ಎಫ್.ಐ ಕಾರ್ಯಕರ್ತರು ನಾಶಪಡಿಸಿದ್ದಾರೆ ಎಂಬ ಆರೋಪದ ಮೇಲೆ ಘರ್ಷಣೆ ಪ್ರಾರಂಭವಾಯಿತು.
ಘಟನೆಯನ್ನು ಪ್ರತಿಭಟಿಸಲು ಎಸ್.ಎಫ್.ಐ.- ಡಿ.ವೈ.ಎಫ್.ಐ ಕಾರ್ಯಕರ್ತರು ಡಿಸಿಸಿ ಕಚೇರಿಗೆ ಮೆರವಣಿಗೆ ನಡೆಸಿದಾಗ, ಮತ್ತೊಂದು ಘರ್ಷಣೆ ನಡೆಯಿತು. ನಂತರ, ಅದು ಕಲ್ಲು ತೂರಾಟಕ್ಕೆ ಕಾರಣವಾಯಿತು. ಪೋಲೀಸರು ಆಗಮಿಸಿ ಸಾಕಷ್ಟು ಪ್ರಯತ್ನದ ನಂತರ ಗಲಾಟೆಯನ್ನು ಕೊನೆಗೊಳಿಸಿದರು. ಎರಡೂ ಗುಂಪುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

