ಕಾಸರಗೋಡು: ಶಬರಿಮಲೆಯಲ್ಲಿ ಸಿಪಿಎಂ ನಡೆಸಿದ ಚಿನ್ನದ ಲೂಟಿ, ಆ ಪಕ್ಷದಬಲುದೊಡ್ಡ ಪಿತೂರಿಯ ಭಾಗವಾಗಿದ್ದು, ನಿಷ್ಪಕ್ಷ ಹಾಗೂ ಪಾರದರ್ಶಕ ಎಸ್. ಐ. ಟಿ ತನಿಖೆಗೆ ಮುಖ್ಗಖ್ಯಮಂತ್ರಿ ಪಿಣರಾಯಿ ವಿಜಯನ್ ಅವಕಾಶ ನೀಡುತ್ತಿಲ್ಲ ಎಂಬುದಾಗಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ. ಅವರು ಶಬರಿಮಲೆ ಲೂಟಿಕೋರರಿಗೆ ಸೂಕ್ತ ಶಿಕ್ಷೆ ನೀಡುವಂತೆ ಆಗ್ರಹಿಸಿ ಕೆ. ಪಿ. ಸಿ. ಸಿ ಆಹ್ವಾನದನ್ವಯ ಕೇರಳದ ಎಲ್ಲಾ ಜಿಲ್ಲೆಗಳಲ್ಲೂ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಲಾದ ಧರಣಿ ಉದ್ಘಾಟಿಸಿ ಮಾತನಾಡಿದರು.
ಪಕ್ಷಕ್ಕಾಗಿ ಹುತಾತ್ಮರಾದವರ ಹೆಸರಲ್ಲಿ ಧನ ಸಂಗ್ರಹಿಸಿ ವಂಚಿಸಿರುವ ಸಿಪಿಎಂ ಪಾಲಿಗೆ ಕೊಳ್ಳೆ ಹೊಡೆಯುವುದು ಉದ್ಯಮವಾಗಿದೆ. ಅಯ್ಯಪ್ಪನ ಚಿನ್ನ ಕದ್ದವರನ್ನು ಕಾನೂನು ಪ್ರಕಾರ ಸೆರೆ ಹಿಡಿದು ಶಿಕ್ಷೆಗೊಳಪಡಿಸಲಾಗದಿದ್ದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ಸಲ್ಲಿಸಿ ಹೊರನಡೆಯುವುದು ಸೂಕ್ತ ಎಂದು ತಿಳಿಸಿದರು.
ಕಾಸರಗೋಡು ಡಿಸಿಸಿ ಅಧ್ಯಕ್ಷ ಪಿ. ಕೆ.ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಹಕೀಂ ಕುನ್ನಿಲ್, ಪ್ರದೀಪ್. ಕುಮಾರ್ ಕೆ. ವಿ, ಸಾಜಿದ್ ಮವ್ವಲ್, ನ್ಯಾಯವಾದಿ ರಾಜೇಂದ್ರನ್ ವಿ. ಪಿ, ಡಿಸಿಸಿ ಕಾರ್ಯದರ್ಶಿ ಸೋಮಶೇಖರ ಜೆ. ಎಸ್, ಪಿ. ವಿ. ಸುರೇಶ್, ಯೂತ್ ಕಾಂಗ್ರೆಸ್ ನಾಯಕ ಕಾರ್ತಿಕೇಯನ್, ಕೆ. ಎಸ್. ಸವಾದ್ ಮಾಮುನಿ ವಿಜಯನ್, ಧನ್ಯಾ ಸುರೇಶ್, ಕುಞಂಬು ನಂಬಿಯಾರ್, ಹರೀಶ್ ಪಿ ನಾಯರ್, ಟಾಮಿ ಪ್ಲಚೇರಿ, ಕೆ.ಪಿ ಪ್ರಕಾಶನ್, ಕೆ.ವಿ.ಸುಧಾಕರನ್ ಪಿ.ಕುಂಜಿಕಣ್ಣನ್, ಕೆ.ಖಾಲಿದ್, ರಾಜು ಕಟ್ಟಕಾಯಂ, ಎಂ.ರಾಜೀವನ್ ನಂಬಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಎಂ. ಸಿ. ಪ್ರಭಾಕರನ್ ಸ್ವಾಗತಿಸಿದರು. ಜಿಲ್ಲಾಧಿಖಾರಿ ಕಚೇರಿ ಎದುರು ಬ್ಯಾರಿಕೇಡ್ ಏರಲು ಯತ್ನಿಸಿದ ಕಾರ್ಯಕರ್ತರನ್ನು ಜಲಫಿರಂಗಿ ಬಳಸಿ ಚದುರಿಸಲಾಯಿತು.

