ಮುಂಬೈ: ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವು ಗೆಲುವು ಸಾಧಿಸಲಿದೆ ಎಂದುಎಂದು ಹಲವು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.
'ಮೈ ಆಕ್ಸಿಸ್ ಇಂಡಿಯಾ' ಸಂಸ್ಥೆಯ ಪ್ರಕಾರ, ಈ ಮೈತ್ರಿಕೂಟವು ಶೇ 42ರಷ್ಟು ಮತಗಳೊಂದಿಗೆ 131-151 ಸ್ಥಾನಗಳನ್ನು ಪಡೆದುಕೊಳ್ಳಲಿದೆ.
ಶಿವಸೇನೆ (ಉದ್ಧವ್ ಬಣ) ಮತ್ತು ಎಂಎನ್‌ಎಸ್ ಮೈತ್ರಿಕೂಟವು ಶೇ 32ರಷ್ಟು ಮತಗಳನ್ನು ಪಡೆದು 58-68 ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಈ ಸಂಸ್ಥೆ ಅಂದಾಜಿಸಿದೆ.
ಕಾಂಗ್ರೆಸ್, ವಂಚಿತ ಬಹುಜನ ಆಘಾಡಿ ಮತ್ತು ರಾಷ್ಟ್ರೀಯ ಸಮಾಜ್ ಪಕ್ಷದ ಮೈತ್ರಿಕೂಟವು ಶೇ 13ರಷ್ಟು ಮತಗಳಿಂದ 12-16 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದೂ ಸಂಸ್ಥೆ ಹೇಳಿದೆ.
ಪುಣೆಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು 70 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಎನ್‌ಸಿಪಿ (ಅಜಿತ್ ಬಣ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಮೈತ್ರಿಕೂಟವು 55 ಸ್ಥಾನಗಳನ್ನು ಗೆಲ್ಲಿಲಿದೆ ಎಂದು ಸಮೀಕ್ಷೆಗಳು ಹೇಳಿವೆ.

