ಕಾಸರಗೋಡು: ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಇದರ 25 ನೇ ವಾರ್ಷಿಕೋತ್ಸವ ಜ. 18ರಂದು ನುಳ್ಳಿಪ್ಪಾಡಿಯ ಕನ್ನಡ ಭವನ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದಯಶಸ್ವಿಗಾಗಿ ಸಿದ್ಧತಾ ಸಭೆ ಕನ್ನಡ ಭವನದಲ್ಲಿ ಜರುಗಿತು.
ಕನ್ನಡ ಭವನದಲ್ಲಿ ನಿರ್ದೇಶಕ ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ ಅದ್ಯಕ್ಷತೆ ವಹಿಸಿದ್ದರು. ಕರ್ನಾಟಕದ ವಿವಿಧ ಕನ್ನಡ ಭವನದ ಘಟಕಗಳ ಅಪೇಕ್ಷೆಯಂತೆ ಆಯಾ ಜಿಲ್ಲೆಯ ಗಣ್ಯ ಸಾಹಿತಿ, ಕನ್ನಡ ನೂರೈವತ್ತರಷ್ಟು ದುರೀಣ ರನ್ನು ಕನ್ನಡ ಭವನದ ವಿವಿಧ ಪ್ರಶಸ್ತಿಗಳ ಮೂಲಕ ಗೌರವಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಂದು ಬೆಳಗ್ಗೆ 7.30 ರಿಂದ ತನಕ ವಿಶ್ವ ಕರ್ಮ ಭಜನಾ ಸಂಘದ 25ಮಂದಿ ಭಜಕರಿಂದ ಭಜನೆ. 9.30ಕ್ಕೆ ಕನ್ನಡ ಭುವನೇಶ್ವರಿ ಬಾವಚಿತ್ರ ಕ್ಕೆ ಹಾರಾರ್ಪಣೆ, ಕನ್ನಡ ಧ್ವಜಾರೋಹಣ,"ಶ್ರೀ ಕೃಷ್ಣ ದೇವರಾಯ "ಭಾವಚಿತ್ರಕ್ಕೆ ಹಾರಾರ್ಪಣೆ, ಕೃಷ್ಣ ರಾಜ ಒಡೆಯರ್ ಭಾವಚಿತ್ರಕ್ಕೆ ಹಾರಾರ್ಪಣೆ, ದೀಪ ಬೆಳಗಿಸಿ ಸಮಾರಂಭ ಉದ್ಘಾಟನೆ ನಡೆಯುವುದು. 10.30 ಯಿಂದ ವಿವಿಧ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಗಾಯನ ಕಾರ್ಯಕ್ರಮ ನಡೆಯಲಿದೆ. 3.30 ರಿಂದ ಸಮಾರೋಪ ಸಮಾರಂಭ ದಲ್ಲಿ ಕನ್ನಡ ಭವನದ ಪದಾಧಿಕಾರಿಗಳಿಗೆ, ಅಭಿಮಾನಿಗಳಿಗೆ "ರಜತ ಸಂಭ್ರಮ ಗೌರವ ಸನ್ಮಾನ "ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ "ರಂಗ ಸಿರಿ ವೇದಿಕೆ ಬಾಯಾರು "ಸತ್ಯನಾರಾಯಣ ಪದಕಣ್ಣಾಯ ನೇತೃತ್ವದ ಯಕ್ಷಗಾನ ಬಯಲಾಟ, ನಂತರ ಕರ್ನಾಟಕದ ಕಲಾವಿದರಿಂದ ಕಲಾ ಪ್ರದರ್ಶನ, ನಡೆಸಲು ತೀರ್ಮಾನಿಸಲಾಯಿತು.


