HEALTH TIPS

ವಿಧಾನಸಭೆ ಪುಸ್ತಕೋತ್ಸವದ ಜೊತೆಗೆ ಮಲಬಾರಿನ ತೆಯ್ಯಂ

ತಿರುವನಂತಪುರಂ: ರಾಜಧಾನಿಯಲ್ಲಿ ನಡೆಯುತ್ತಿರುವ ಕೇರಳ ವಿಧಾನಸಭೆ ಅಂತರರಾಷ್ಟ್ರೀಯ ಪುಸ್ತಕೋತ್ಸವದ (ಕೆ.ಎಲ್.ಐ.ಬಿ.ಎಫ್-2026) ನಾಲ್ಕನೇ ಆವೃತ್ತಿಗೆ ತೆರೆ ಬೀಳುತ್ತಿದ್ದಂತೆ, ಈ ಬಾರಿ ಪ್ರಮುಖ ಆಕರ್ಷಣೆ ಉತ್ತರ ಮಲಬಾರ್‍ನ ವಿಶಿಷ್ಟ ಧಾರ್ಮಿಕ ಕಲೆಯಾದ ತೆಯ್ಯಂ.

ಜನವರಿ 7 ರಿಂದ 13 ರವರೆಗೆ ವಿಧಾನಸಭೆ ಸಂಕೀರ್ಣದಲ್ಲಿ ನಡೆಯುತ್ತಿರುವ ಪುಸ್ತಕೋತ್ಸವದ ಭಾಗವಾಗಿ ಜನವರಿ 8 ರಿಂದ 12 ರವರೆಗೆ ತೆಯ್ಯಂಗಳನ್ನು ಪ್ರದರ್ಶಿಸಲಾಗುತ್ತದೆ. 


ಜನವರಿ 8 ರಂದು ಸಂಜೆ 6 ಗಂಟೆಗೆ ಮಾಹೆಯ 'ತೆಯ್ಯಂ ಪೈತ್ರಿಕ ಸಮಿತಿ' ಪ್ರಸ್ತುತಪಡಿಸುವ 'ಕೋಡಿಯೆಟ್ಟಂ' ಸಮಾರಂಭದೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.

ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಅವರು ಸ್ಪೀಕರ್ ಎ. ಎನ್. ಶಂಸೀರ್ ಅವರ ಸಮ್ಮುಖದಲ್ಲಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ಜನವರಿ 8 ರಂದು ಸಂಜೆ 6.30 ಕ್ಕೆ 'ಕುರುತಿ ತರ್ಪಣಂ ಮತ್ತು ಪೂಕುಟ್ಟಿಚಾತನ್ ತಿರಾಯುಂ' ಕಾರ್ಯಕ್ರಮ ನಡೆಯಲಿದೆ. ಈ ತೆಯ್ಯಂ ಫ್ರಾಂಕೋ-ಬ್ರಿಟಿಷ್ ಯುದ್ಧದ ಸಮಯದಲ್ಲಿ ನಾಶವಾದ ಸೇಂಟ್ ತೆರೇಸಾ ಚರ್ಚ್‍ನ ಪುನರ್ನಿರ್ಮಾಣದ ದಂತಕಥೆಯನ್ನು ಆಧರಿಸಿದೆ. ರಾತ್ರಿ 8 ಗಂಟೆಗೆ ಮುತ್ತಪ್ಪನ್ ವೆಲ್ಲಾಟ್ಟಂ ಕೂಡ ವೇದಿಕೆ ಏರಲಿದ್ದಾರೆ.

ಜ.9ರಂದು ಸಂಜೆ 7ಕ್ಕೆ ಸಮರ ಪರಾಕ್ರಮ ಬಿಂಬಿಸುವ ಪಡವೀರನ್ ತೆಯ್ಯಂ, ಜ.10ರಂದು ಸಂಜೆ 7ಕ್ಕೆ ದಮನಿತರ ಹೋರಾಟದ ಮನೋಭಾವ ಬಿಂಬಿಸುವ ಕುಟ್ಟಿಚ್ಚಾತ್ತನ್ ತಿರ ಪ್ರದರ್ಶನ ನಡೆಯಲಿದೆ.

ಜನವರಿ 11 ರಂದು ಸಂಜೆ 6 ಗಂಟೆಗೆ ಅಯೋಧನ ಫೌಂಡೇಶನ್ ಪ್ರಸ್ತುತಪಡಿಸುವ ಕಳರಿಪಯಟ್ಟು ಪ್ರದರ್ಶನದ ನಂತರ 16 ಉಗ್ರ ಮೂರ್ತಿಯಾದ ಅಗ್ನಿಕಂಠ ಕರ್ಣನ್ ತೆಯ್ಯಂ ನಡೆಯಲಿದೆ.

ಜನವರಿ 12 ರಂದು ಸಂಜೆ 7 ಗಂಟೆಗೆ ವಸುರಿಮಾಲಾ ಭಗವತಿ ತಿರ, ರಾತ್ರಿ 8 ಗಂಟೆಗೆ ಸಾಮಾಜಿಕ ತಾರತಮ್ಯದ ವಿರುದ್ಧ ಧ್ವನಿ ಎತ್ತುವ ಪೊಟ್ಟನ್ ತೆಯ್ಯಂ ಪ್ರದರ್ಶನಗೊಳ್ಳಲಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries