ಕೊಚ್ಚಿ: ವಾಮಾಚಾರ ಮತ್ತು ಮೂಢ ನಂಬಿಕೆಗಳನ್ನು ಎದುರಿಸಲು ವಿಶೇಷ ಸೆಲ್ ರಚಿಸುವ ಬಗ್ಗೆ ಪರಿಗಣಿಸಲು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯದ ಆದೇಶ ನೀಡಲಾಗುವುದು ಎಂದು ರಾಜ್ಯ ವಕೀಲ ಎನ್ ಮನೋಜ್ ಕುಮಾರ್ ತಿಳಿಸಿದ ನಂತರ, ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್ದಾರ್ ಮತ್ತು ನ್ಯಾಯಮೂರ್ತಿ ವಿಎ ಶ್ಯಾಮ್‍ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯನ್ನು ಫೆಬ್ರವರಿ 10 ಕ್ಕೆ ಮುಂದೂಡಿತು.
ಮೂಢನಂಬಿಕೆ ವಿರೋಧಿ ಕಾಯ್ದೆಯನ್ನು ರಚಿಸುವ ಪ್ರಕ್ರಿಯೆಯಲ್ಲಿನ ವಿಳಂಬವನ್ನು ಗಮನದಲ್ಲಿಟ್ಟುಕೊಂಡು ಮಧ್ಯಂತರ ಕಾರ್ಯವಿಧಾನವಾಗಿ ವಿಶೇಷ ಕೋಶವನ್ನು ರಚಿಸುವಂತೆ ಹೈಕೋರ್ಟ್ ಸೂಚಿಸಿದೆ. ಹೊಸ ಕಾನೂನನ್ನು ರಚಿಸುವ ಪ್ರಕ್ರಿಯೆಯ ಮುಂದುವರಿಕೆಗೆ ಇದು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

