ತಿರುವನಂತಪುರಂ: ರಾಜ್ಯದಲ್ಲಿ ಎಸ್.ಐ.ಆರ್. ಆರಂಭಗೊಂಡ ನಂತರ ವ್ಯಾಪಕ ಟೀಕೆ-ಟಿಪ್ಪಣಿಗಳು ಕೇಳಿಬಂದಿತು. ಮುಖ್ಯವಾಗಿ ಅನೇಕರ ಹೆಸರು ಇಲ್ಲದಿರುವುದು ಸಮಸ್ಯೆಯಾಯಿತು. ಇದು ಬಳಿಕ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವವರೆಗೆ, ಮೋದಿ-ಶಾ ಅವರನ್ನು ಹಿಗ್ಗಾಮುಗ್ಗ ಬಯ್ಯುವವರೆಗೂ ಮುಂದುವರಿಯಿತು. ಆದರೆ ಮೂಲ ವಿಷಯಗಳನ್ನು ಇವರೆಲ್ಲ ಮರೆತಿದ್ದರು ಅಥವಾ ಗೊತ್ತಿಲ್ಲದಂತೆ ನಟಿಸಿರಬೇಕು. ಯಾಕೆಂದರೆ 2002ರ ಮತದಾರ ಪಟ್ಟಿಯ ಅನುಸಾರ ಎಸ್ ಐ ಆರ್ ಪ್ರಕ್ರಿಯೆ ಇರುತ್ತದೆ. ಆ ಕಾಲದಲ್ಲಿ ಪಟ್ಟಿಯಲ್ಲಿ ಸೇರದವರು ಕೆಲವು ದಾಖಲೆ-ವಿಚಾರಣೆ ಸಲ್ಲಿಸಿದರೆ ಸಾಕೆಂದು ಹೇಳಲಾಗಿತ್ತು. ಬಳಿಕ ಅದೆಲ್ಲ ಸುಸೂತ್ರವಾಗಿ ನಡೆಯುತ್ತಿದೆ. ಈ ಮಧ್ಯೆ ರಾಜ್ಯ ಚುನಾವಣಾ ಆಯುಕ್ತರ ಹೆಸರೇ ಮತದಾರ ಪಟ್ಟಿಯಲ್ಲಿಲ್ಲದಿರುವ ಕುತೂಹಲ ಇದೀಗ ಹೊರಬಿದ್ದಿದೆ.
2002 ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಮುಖ್ಯ ಚುನಾವಣಾಧಿಕಾರಿ (ಸಿಇಒ) ರತನ್ ಯು. ಖೇಲ್ಕರ್ ಅವರ ವಿಚಾರಣೆ ನಿನ್ನೆ ನಡೆದಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಕವಡಿಯಾರ್ ಗ್ರಾಮ ಕಚೇರಿಯಲ್ಲಿ ಸಿಇಒ ವಿಚಾರಣೆಗೆ ಹಾಜರಾಗಿದ್ದರು.
ಕರ್ನಾಟಕದ ಮೂಲದ ರತನ್ ಯು. ಖೇಲ್ಕರ್ ಅವರ ಹೆಸರು ಎಸ್‍ಐಆರ್ ಪಟ್ಟಿಯಲ್ಲಿರಲಿಲ್ಲ. ಅವರ ಪೆÇೀಷಕರ ಹೆಸರು ಕೂಡಾ ಕರ್ನಾಟಕ ಪಟ್ಟಿಯಲ್ಲಿ ಇದ್ದಿರಲಿಲ್ಲ. ಅವರ ಹೆಸರು ಪ್ರಸ್ತುತ ಕೇರಳ ಮತದಾರರ ಪಟ್ಟಿಯಲ್ಲಿದ್ದರೂ, ಅವರ ಹೆಸರು 2002 ರ ಕೇರಳ ಪಟ್ಟಿ ಅಥವಾ ಕರ್ನಾಟಕ ಎಸ್‍ಐಆರ್ ಪಟ್ಟಿಯಲ್ಲಿ ಇಲ್ಲದ ಕಾರಣ ಮ್ಯಾಪಿಂಗ್ ಸಾಧ್ಯವಾಗಲಿಲ್ಲ.
ಗಣತಿ ನಮೂನೆಯನ್ನು ಭರ್ತಿ ಮಾಡಿದಾಗ, ಸಿಇಒ ಇದನ್ನು ದಾಖಲಿಸಿದ್ದರು. ಸಿಇಒ ಎಣಿಕೆ ನಮೂನೆಯೊಂದಿಗೆ ಪಾಸ್ ಪೋರ್ಟ್‍ನ ಪ್ರತಿಯನ್ನು ಸಹ ನೀಡಿದ್ದರು.
ಇದರ ನಂತರ, ಇಆರ್‍ಒ ಬಿಎಲ್‍ಒ ಮೂಲಕ ವಿಚಾರಣೆಗೆ ನೋಟಿಸ್ ನೀಡಿದ್ದರು. ಶನಿವಾರ ಕವಡಿಯಾರ್ ಗ್ರಾಮ ಕಚೇರಿಯಲ್ಲಿ ವಿಚಾರಣೆ ನಡೆದಿದ್ದು ಹೀಗೆ. ಗುರುತಿನ ಚೀಟಿಯಲ್ಲಿ ಪಾಸ್ ಪೋರ್ಟ್‍ನ ಪ್ರತಿಯನ್ನು ಪುರಾವೆಯಾಗಿ ಪ್ರಸ್ತುತಪಡಿಸಲಾಯಿತು. ನಂತರ ಇ.ಆರ್.ಒ ಅದನ್ನು ಪರಿಶೀಲಿಸಿದರು.
ಕೆಲವೇ ನಿಮಿಷಗಳಲ್ಲಿ ಪ್ರಕ್ರಿಯೆಯು ಪೂರ್ಣಗೊಂಡಿತು. ರತನ್ ಯು. ಖೇಲ್ಕರ್ ಅವರು 2002 ರಲ್ಲಿ ಸೇವೆಯಲ್ಲಿ ಇದ್ದಿರಲಿಲ್ಲ ಮತ್ತು ಆ ಸಮಯದಲ್ಲಿ ಕರ್ನಾಟಕದಲ್ಲಿದ್ದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

